ಮೊರಾದಾಬಾದ್: ನಾನು ದುಡಿದಿದ್ದು ಹಾಗೂ ನನ್ನದಲ್ಲದ್ದು ಎರಡೂ ನನ್ನೊಬ್ಬನಿಗೆ ಇರಲಿ ಎಂದು ಕೆಲವರು ಬಯಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯರು ತಮ್ಮ ಒಟ್ಟು ಆಸ್ತಿಯನ್ನು ಬಡವರ ಉಪಯೋಗಕ್ಕಾಗಿ ಸರ್ಕಾರಕ್ಕೆ ದಾನ ಮಾಡಿದ್ದಾರೆ.
ಉತ್ತರ ಪ್ರದೇಶದ ವೈದ್ಯ ಅರವಿಂದ್ ಗೋಯಲ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 600 ಕೋಟಿ ರೂ. ಆಗಿದ್ದು, ಇಡೀ ಆಸ್ತಿಯನ್ನು ದಾನ ಮಾಡಿದ್ದಾರೆ. ಇವರು ಕಳೆದ 50 ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದು, 25 ವರ್ಷಗಳ ಹಿಂದೆ ಈ ನಿರ್ಧಾರ ಕೈಗೊಂಡಿದ್ದರಂತೆ.
ಲಾಕ್‌ಡೌನ್ ಸಮಯದಲ್ಲಿ ಮೊರಾದಾಬಾದ್‌ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅರವಿಂದ್ ಕುಮಾರ್ ಗೋಯಲ್ ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸಿದ್ದರು. ಅವರು ರಾಜ್ಯದಲ್ಲಿ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಯನ್ನು ಸಹ ಏರ್ಪಡಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಮತ್ತು ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಡಾ.ಗೋಯಲ್ ಅವರನ್ನು ನಾಲ್ಕು ಬಾರಿ ರಾಷ್ಟ್ರಪತಿಗಳು ಗೌರವಿಸಿದ್ದಾರೆ. ಪತ್ನಿ ರೇಣು ಗೋಯಲ್ ಹೊರತುಪಡಿಸಿ, ಅರವಿಂದ್ ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
PublicNext
21/07/2022 02:40 pm