ಕೊಯಿಕ್ಕೋಡ್: ಆತ ಅತಿ ಕಿರಿಯ ವಯಸ್ಸಿನ ಶಾಸಕ. ಆಕೆ ಅತಿ ಕಿರಿಯ ವಯಸ್ಸಿನ ಮೇಯರ್. ಇವರು ಮದುವೆ ಆಗ್ತಿದ್ದಾರೆ. ಇವರ ವಿವಾಹಕ್ಕೆ ಈಗ ದೇವರನಾಡು ಕೇರಳವೇ ಸಾಕ್ಷಿ ಆಗುತ್ತಿದೆ.
ಹೌದು. ಮದುವೆ ಆಗ್ತಿರೋ ಆ ಮೇಯರ್ ಹೆಸರು ಆರ್ಯಾ ರಾಜೇಂದ್ರನ್. ವಯಸ್ಸು ಕೇವಲ 21 ವರ್ಷ. ಮದುವೆ ಆಗ್ಗಿರೋ ಬಲ್ಸುರಿ ಕ್ಷೇತ್ರದ ಶಾಸಕ ಕೆ.ಎಂ.ಸಚಿನ್ ದೇವ್. ಏಜ್ ಕೇವಲ 28 ವರ್ಷ ಮಾತ್ರ.
ಇದೇ ಸೆಪ್ಟೆಂಬರ್-4 ರಂದು ಬೆಳಗ್ಗೆ 11 ಗಂಟೆಗೆ ಕೇರಳದ ಎಕೆಜಿ ಹಾಲ್‌ನಲ್ಲಿ ಅದ್ದೂರಿಯಾಗಿಯೇ ಇವರ ಮದುವೆ ನಡೆಯುತ್ತಿದೆ. ಇನ್ನು ಇವರು ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇವರು ಪರಿಚಯವಾಗಿದೆ. ಈಗ ಮದುವೆ ಆಗು ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
PublicNext
12/07/2022 10:41 am