ನವದೆಹಲಿ: ಇಡೀ ಅಫ್ಘಾನಿಸ್ತಾನ ಸದ್ಯ ತಾಲಿಬಾನಿಗಳ ವಶದಲ್ಲಿದೆ. ಅಲ್ಲಿ ದೇಶಾದ್ಯಂತ ಎಲ್ಲೆಂದರಲ್ಲಿ ಭಯದ ವಾತಾವರಣ. ಈ ನಡುವೆ ಅಪ್ಘಾನಿಸ್ತಾನದಲ್ಲಿದ್ದ ಬಹುತೇಕ ಭಾರತೀಯರು ವಾಪಸ್ ತಾಯ್ನಾಡಿಗೆ ಸುರಕ್ಷಿತವಾಗಿ ಬಂದಿದ್ದಾರೆ. ಇದರಲ್ಲಿ ನಿನ್ನೆಯಷ್ಟೇ ಸಿಖ್ ಸಮುದಾಯದ ಜನ ಕೂಡ ಭಾರತಕ್ಕೆ ಬಂದಿಳಿದಿದ್ದಾರೆ.
ಭಾರತಕ್ಕೆ ಬಂದ ಸಿಖ್ ಸಮುದಾಯದ ಒಂದು ಗುಂಪು ರಾತ್ರೋರಾತ್ರಿ ಜನಪದ ಶೈಲಿಯ ವಿಶಿಷ್ಟ ಹಾಡೊಂದನ್ನು ಹಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ವಿಭಿನ್ನವಾಗಿ ಥ್ಯಾಂಕ್ಸ್ ಹೇಳಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು ನೆಟ್ಟಿಗರ ಹೃದಯ ಗೆದ್ದಿದೆ.
PublicNext
25/08/2021 04:46 pm