ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತನ್ನ ಲಿಂಗ ಪರಿವರ್ತನೆ ಬಗ್ಗೆ ಹೆಮ್ಮೆಯಿದೆ: "ಶನಾ" ಸಮರ್ಥನೆ

ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಅವರ ಪುತ್ರ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ ಎನ್ನುವ ವಿಷಯ ಅಂತರ್ಜಾಲ ಸುದ್ದಿ ಮಾಧ್ಯಮಗಳಲ್ಲಿ ಈಗಾಗಲೇ ಬಂದಿರುವ ಹಳೆ ಸುದ್ದಿ.

ವರ್ಷದ ಹಿಂದೆಯೇ ವಿದೇಶದಲ್ಲಿ ತಮ್ಮ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಲಿಂಗ ಪರಿವರ್ತನೆ ನಂತರ ಶಾನ್​ ತನ್ನ ಹೆಸರನ್ನು ಶನಾ ಎಂದು ಬದಲಾಯಿಸಿಕೊಂಡಿದ್ದು, ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.

ತನಗೆ ಸರಿ ಎನಿಸಿದ ಲಿಂಗ ಹೊಂದಲು ತಾನು ಸ್ವತಂತ್ರನಾಗಿದ್ದೇನೆ ಎಂದು ಅವರು ತಮ್ಮ ವಾಲ್​ನಲ್ಲಿ ಬರೆದುಕೊಂಡಿದ್ದಾರೆ.

ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ವಿಷಯ ತಿಳಿದ ತನ್ನೊಂದಿಗೆ ಇದ್ದ ಸ್ನೇಹಿತರು ಇಂದು ದೂರಾಗಿದ್ದಾರೆ.

ನಾವು ಯಾವಾಗಲೂ ನಮಗೆ ಆಗದವರನ್ನೇ ನಮ್ಮ ಸುತ್ತಲೂ ಇಟ್ಟುಕೊಂಡಿರುತ್ತೇವೆ ಎಂದು ಬರೆದುಕೊಂಡಿರುವ ಅವರು, ಇಂತಹ ಕಷ್ಟಗಳನ್ನು ನಾನು ನನ್ನ ಬಾಲ್ಯದಿಂದಲೂ ಅನುಭವಿಸಿಕೊಂಡು ಬಂದಿದ್ದೇನೆ.

ಸಮಾಜದಲ್ಲಿನ ಕಟ್ಟುಪಾಡುಗಳಿಗೆ ತಕ್ಕಂತೆ ಇಲ್ಲಿಯವರೆಗೂ ಬದುಕಿದ್ದೇನೆ. ಇನ್ನು ಮುಂದೆ ನನ್ನ ಇಷ್ಟದಂತೆ ಬದುಕುತ್ತೇನೆ.

ಇದು ದಶಕಗಳಿಂದ ನನ್ನೊಳಗೆ ನಡೆದುಕೊಂಡು ಬಂದಿದ್ದ ಪರಿವರ್ತನೆಯ ಪ್ರಕ್ರಿಯೆ ಪರಿಣಾಮ ನಾನು ಪರಿವರ್ತನೆ ಆಗಿದ್ದೇನೆ.

ನಾನು ಸಲಿಂಗಿಯಲ್ಲ. ಆದರೆ, ತನ್ನ ಲಿಂಗ ಪರಿವರ್ತನೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಮ್ಮ ಮನಸ್ಸಿನಲ್ಲಾದ ತಳಮಳಗಳ ಬಗ್ಗೆ ಶಾನ ಬರೆದು ಕೊಂಡಿದ್ದಾರೆ.

Edited By : Raghavendra K G
PublicNext

PublicNext

20/10/2020 11:54 am

Cinque Terre

87.44 K

Cinque Terre

15

ಸಂಬಂಧಿತ ಸುದ್ದಿ