ಚಿಂಚೋಳಿ: ಹೋರಾಟಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಲಿದ್ದ ಬಿಜೆಪಿ ಮುಖಂಡ ರೇವಣಸಿದ್ದಪ್ಪ ಮಜ್ಜಗಿ (56) ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಬಹು ವರ್ಷಷಗಳಿಂದ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದ ರೇವಣಸಿದ್ದಪ್ಪ ಅವರು ಒಂದು ಅವಧಿಗೆ ಪಕ್ಷದ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ನಿನ್ನೆ ಬುಧವಾರ ಲಾಡ್ಜ್ ಕೋಮಣೆಯಲ್ಲಿ ರೇವಣಸಿದ್ದಪ್ಪ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಕೂಡಲೇ ಅವರು ತಂಗಿದ್ದ ಹೊಟೇಲ್ ಕೋಣೆಗೆ ಧಾವಿಸಿದ ಸಂಸದ ಡಾ. ಉಮೇಶ್ ಜಾಧವ್ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರ ಭರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ನೇತೃತ್ವದಲ್ಲಿ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಚಿಂಚೋಳಿಯ 9 ಜನರೊಂದಿಗೆ ವಿಮಾನದ ಮೂಲಕ ದೆಹಲಿಗೆ ಹೋಗಿದ್ದರು. ಹೋರಾಟದಲ್ಲಿ ಪಾಲ್ಗೊಂಡು ಗುರುವಾರ ಚಿಂಚೋಳಿಗೆ ವಾಪಸ್ ಆಗಬೇಕಿತ್ತು. ರೇವಣಸಿದ್ದಪ್ಪ ಮಜ್ಜಗಿ ಅವರಿಗೆ ಪತ್ನಿ, ಪುತ್ರ-ಪುತ್ರಿ ಇದ್ದಾರೆ. ಇಂದು(ಗುರುವಾರ) ಸಂಜೆ ಚಿಂಚೋಳಿಯಲ್ಲಿ ಅವರ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
PublicNext
04/08/2022 02:21 pm