ತಿರುವನಂತಪುರ: ಪುನೀತ್ ರಾಜಕುಮಾರ್ ಅಕಾಲಿಕ ಮರಣ ಇಡೀ ರಾಜ್ಯಕ್ಕೆ ಶಾಕ್ ಕೊಟ್ಟಿದ್ದೇನೋ ಸರಿ.ಆದರೆ ಪುನೀತ್ ಸಾವಿನಿಂದ ಪಕ್ಕದ ಕೇರಳ ರಾಜ್ಯವೂ ಈಗ ಶಾಕ್ ತೆಗೆದುಕೊಂಡು ಅಲರ್ಟ್ ಆಗಿದೆ. ಜಿಮ್ ಮಾಡೋರಿಗಾಗಿಯೇ ಹೊಸ ನಿಯಮವನ್ನೂ ಜಾರಿಗೊಳಿಸಿದೆ.
ಅತಿಯಾದ ವರ್ಕೌಟ್ ನಿಂದ ಹೃದಯಾಘಾತ ಆಗುತ್ತದೆಯೇ ? ಈ ಪ್ರಶ್ನೆ ಕರ್ನಾಟಕದಲ್ಲೀಗ ಅತಿ ಹೆಚ್ಚು ಕೇಳಲ್ಪಡುತ್ತಿದೆ. ಪುನೀತ್ ರಾಜಕುಮಾರ್ ಸಾವಿನಿಂದಲೇ ಈ ಪ್ರಶ್ನೆ ಈಗ ಉದ್ಘವವಾಗಿದೆ. ಹೆವಿ ವರ್ಕೌಟ್ ಮಾಡಿದ್ದರಿಂದಲೇ ಪುನೀತ್ ಹೃದಯ ನಿಂತು ಹೋಗಿದೆ ಅನ್ನೋದೇ ಈಗಿನ ಈ ಪ್ರಶ್ನೆ ಹಿಂದಿನ ಆತಂಕ.
ಈ ಕಾರಣಕ್ಕೇನೆ ಕೇರಳ ಸರ್ಕಾರ ತಮ್ಮಲ್ಲಿಯ ಎಲ್ಲ ಜಿಮ್ ಗಳಿಗೆ ಒಂದು ಹೊಸ ನಿಯಮ ಜಾರಿಗೊಳಿಸಿದೆ.AED ಸ್ವಯಂಚಾಲಿತ ಎಕ್ಸ್ಟ್ರಾನಲ್ ಡಿಫಿಬ್ರಿಲೇಟರ್ ಅನ್ನೋ ಈ ಉಪಕರಣ ಜಿಮ್ ನಲ್ಲಿ ಇರಲೇಕು. ಈ ಡಿವೈಸ್ ಹೃದಯ ಸಂಬಂಧಿ ಸಮಸ್ಯೆ ಇದ್ದರೇ ಅದನ್ನ ತಕ್ಷಣವೇ ಕಂಡು ಹಿಡಿಯುವ ಕೆಲಸ ಮಾಡುತ್ತದೆ.ಹಾಗಾಗಿಯೇ AED ಉಪಕರಣ ಪ್ರತಿ ಜಿಮ್ ನಲ್ಲೂ ಕಡ್ಡಾಯಗೊಳಿಸಲಾಗಿದೆ. ಕ್ರೀಡಾಂಗಣ ಮತ್ತು ಒಳಾಂಗಣದಲ್ಲೂ ಈ ಡಿವೈಸ್ ಇರತಕ್ಕದ್ದು ಜೊತೆಗೆ ಪ್ರಥಮ ಚಿಕಿತ್ಸೆ ಕಿಟ್ ಕೂಡ ಇರಬೇಕು ಅಂತಲೇ ಸಾರಿಗೆ ಸಚಿವ ಅಂಟೋನಿ ರಾಜು ಹೇಳಿದ್ದಾರೆ. ಈ ಸಂಬಂಧ ಈಗಾಗಲೇ ಕ್ರೀಡಾ ಸಚಿವ ವಿ.ಅಬ್ದುರೆಹಮಾನ್ ಅವರೊಟ್ಟಿಗೇನೂ ಚರ್ಚಿಸಿಲಾಗಿದ್ದು ಎಲ್ಲ ಜಿಮ್ ಗಳಲ್ಲೂ ಈ ನಿಯಮ ಜಾರಿ ಆಗುವಂತೆ ಹೇಳಲಾಗಿದೆ ಎಂದಿದ್ದಾರೆ ಸಚಿವ ಅಂಟೋನಿ ರಾಜು.ಅಂದ್ಹಾಗೆ ಪುನೀತ್ ನಿಧನದ ಬಗ್ಗೆನೂ ಸಚಿವರು ಉಲ್ಲೇಖಿಸಿ ಈ ಎಲ್ಲ ವಿಷಯಗಳನ್ನ ವಿವರವಾಗಿಯೇ ತಿಳಿಸಿದ್ದಾರೆ.
PublicNext
31/10/2021 05:22 pm