ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಜನರು ಲಸಿಕೆ ಪಡೆಯಲು ಮುಂದಾಗಬೇಕು:- ಡಾ. ಸುಧಾಕರ

ಹುಬ್ಬಳ್ಳಿ: ಕಳೆದ ಮೂರು ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕೊರೋನಾ ನಿರ್ಣಾಮವಾಗಿದೆ ಎಂಬ ಉದಾಸೀನತೆ ಭಾವನೆಯಿಂದ ಜನರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ, ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾರಕ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಶೇ.17 ರಷ್ಟು ಎರಡು ಲಸಿಕೆ ಪಡೆಯಬೇಕಾದ ಜನರು ಇದ್ದಾರೆ. ಶೇ.62 ರಷ್ಟು ಜನರು ಎರಡನೇ ಡೋಸ್ ಪಡೆಯಬೇಕಿದೆ. ಲಸಿಕೆಯಿಂದ ದೂರ ಉಳಿದವರನ್ನು ಕರೆತರುವ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31 ರ ಹೊತ್ತಿಗೆ ಶೇ.90 ರಷ್ಟು ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ.

ಮೊದಲ ಡೋಸ್ ಪಡೆದು ಅವಧಿ ಮುಗಿದವರ ಸಂಖ್ಯೆ 53 ಲಕ್ಷ ಇದ್ದು, ಇವರನ್ನು ಫೋನ್ ಮೂಲಕ ಕರೆಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆದರೂ ಜನರು ಮುಂದೆ ಬರುತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಸದ್ಯ 60 ಲಕ್ಷ ಲಸಿಕೆ ದಾಸ್ತಾನು ಇದೆ. ರಾಜ್ಯದ ಬೇಡಿಕೆಗೆ ತಕ್ಕಂತೆ ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿದೆ. ಕೋವಿಡ್ ನಿಂದ ಸರ್ಕಾರ ಸವಾಲುಗಳನ್ನು ಎದುರಿಸಿದ್ದು ಪಾಠ ಕಲಿತ್ತಿದೆ. ಇದರ ಪರಿಣಾಮವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲು ಸಾಧ್ಯವಾಯಿತು ಎಂದರು.

ಲಸಿಕೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕಾರಣ ಮಾಡಿದವು. ಇದು ಮೋದಿ ಲಸಿಕೆ ಎಂದು ಕೂಡಾ ವ್ಯಂಗ್ಯವಾಡಿದರು. ಆದರೆ ಕೋರೋನಾ ನಿಯಂತ್ರಣಕ್ಕೆ ಲಸಿಕೆವೊಂದೆ ಮದ್ದು ಎಂದು ಅರಿತ ಪ್ರತಿಪಕ್ಷಗಳು ಮಾರ್ಚ್ ನಲ್ಲಿ ಕ್ಯೂ ನಿಂತರು ಎಂದು ಡಾ.ಸುಧಾರಕ ಚೇಡಿಸಿದರು.

ಸಿದ್ದರಾಮಯ್ಯ ತನಿಖೆ ಏಕೆ ಮಾಡಲಿಲ್ಲ?:- ಕೋಲಾರ್ ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಕೆ ಸುಧಾರಕ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅವರು ತನಿಖೆ ನಡೆಸುವಂತೆ ಈ ಹಿಙದೆಯೇ ದೂರು ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಇದನ್ನು ಯಾಕೆ ತನಿಖೆ ಮಾಡಲಿಲ್ಲ. ಈ ಮೂಲಕ ಹಗರಣ ಮಾಡಿದವರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಡಿಸಿಸಿ ಬ್ಯಾಂಕ್ ಹಗರಣ ವಿಚಾರದಲ್ಲಿ ಪ್ರತಿಪಕ್ಷ ಮಾಡುವ ಕೆಲಸವನ್ನು ಒಬ್ಬ ಸಚಿವನಾಗಿ ಮಾಡುತ್ತಿದ್ದೇನೆ. ಅದನ್ನು ಅಧಿಕಾರದ ಮದದಿಂದ ಮಾತನಾಡಿದ್ದೇನೆ ಎಂದರೆ ಏನೂ ಹೇಳುವುದು. ಇದನ್ನು ಜನರಿಗೆ ಬಿಡುತ್ತೇನೆ ಎಂದರು.

Edited By : Nagesh Gaonkar
PublicNext

PublicNext

22/10/2021 02:52 pm

Cinque Terre

55.14 K

Cinque Terre

0

ಸಂಬಂಧಿತ ಸುದ್ದಿ