ಉದ್ಯಾವರ: ಪ್ರಧಾನಿ ಮೋದಿ ಆಯುಷ್ ಇಲಾಖೆಗೆ ಶಕ್ತಿಕೊಟ್ಟಿದ್ದಾರೆ.ಆಯುರ್ವೇದ ವೈದ್ಯ ಪದ್ಧತಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಆಗುತ್ತಿದೆ.ಕಳೆದ ಏಳು ವರ್ಷದಲ್ಲಿ ಆಯುಷ್ ಇಲಾಖೆ ದೇಶಾದ್ಯಂತ ಬಹಳ ವಿಸ್ತಾರವಾಗಿ ಬೆಳೆದಿದೆ.ಎಲ್ಲಾ ರೋಗಗಳಿಗೂ ಆಯುರ್ವೇದ ಚಿಕಿತ್ಸೆ ಫಲಕಾರಿ.ದೇಶಾದ್ಯಂತ ಸಂಶೋಧನೆಗಳು, ಪ್ರಯೋಗಗಳು ನಡೆಯುತ್ತಿವೆ ಎಂದು ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನವಾಲ ಹೇಳಿದ್ದಾರೆ.
ಉದ್ಯಾವರದ ಎಸ್ ಡಿಎಂ ಆಯುರ್ವೇದಿಕ್ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ವಿಚಾರದಲ್ಲಿ ಎಸ್ ಡಿಎಂ ಮಹತ್ವದ ಹೆಜ್ಜೆ ಇಟ್ಟಿದೆ.ಶ್ರಮದ ಫಲದಿಂದ ಧರ್ಮಸ್ಥಳ ಸಂಸ್ಥೆ ಸಾಧನೆ ಮಾಡುತ್ತಿದೆ.ವೀರೇಂದ್ರ ಹೆಗ್ಗಡೆಯವರ ಸೇವಾ ಮನೋಭಾವದಿಂದ ಇಷ್ಟೆಲ್ಲಾ ಸಾಧನೆ ಸಾಧ್ಯ ಆಗಿದೆ ಎಂದರು.
ಆಯುರ್ವೇದದ ವಿಶ್ವಾಸಾರ್ಹತೆ ಇತ್ತೀಚೆಗೆ ಹೆಚ್ಚಾಗುತ್ತಿದೆ.ಜನರಿಗೆ ಆಯುರ್ವೇದದ ಮೇಲೆ ನಂಬಿಕೆ ಬರುತ್ತಿದೆ.ಆಯುರ್ವೇದ ಚಿಕಿತ್ಸೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ನವಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ.ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
PublicNext
25/09/2021 04:50 pm