ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಡಿತರ ಅಕ್ಕಿ ಉಣ್ಣಲು ದುಸ್ತರ; ಜನಸಾಮಾನ್ಯರ ಬವಣೆ ಸಿಎಂಗೆ ಅರುಹಿದ ನಿಯೋಗ

ಬೆಂಗಳೂರು: ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಡಿತರ ಮೂಲಕ ನೀಡುತ್ತಿರುವ ಅಕ್ಕಿಯ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿತು.

ಸದ್ಯ ನೀಡುತ್ತಿರುವ ಕೊಚ್ಚಿಗೆ ಅಕ್ಕಿ ಅತ್ಯಂತ ಕಳಪೆ ಮಟ್ಟದ್ದಾಗಿದ್ದು, ಜನಸಾಮಾನ್ಯರು ಅದರಲ್ಲೂ ಬಡವರು ಅಕ್ಕಿಯನ್ನು ಉಪಯೋಗಿಸಲಾರದೆ ಪಡಿತರವನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ, ಹೆಚ್ಚು ದರದ ಅಕ್ಕಿಯನ್ನು ಪಡೆಯುತ್ತಿದ್ದಾರೆ. ಕೆಲವು ಕಡೆ ಪಡಿತರವನ್ನೇ ಪಡೆಯದೆ ಉಪಯೋಗವಿಲ್ಲದ ಹಾಗೆ ಬಿಡುತ್ತಾರೆ. ಇದರಿಂದಾಗಿ ಪಡಿತರ ಮೂಲಕ ಪಡೆದುಕೊಂಡ ಕಳಪೆ ಗುಣಮಟ್ಟದ ಅಕ್ಕಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸುಗಳೂ ದಾಖಲಾಗುತ್ತಿವೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಬೇಕಾಗುವ ಅಕ್ಕಿಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೇ ಬೆಳೆಯುವ ಕುಚ್ಚಲಕ್ಕಿಯನ್ನು ತೆಗೆದುಕೊಂಡು ಅಲ್ಲಿಯೇ ಪಡಿತರ ವಿತರಿಸಬೇಕೆಂದು ಅಥವಾ ದಕ್ಷಿಣ ಕನ್ನಡ ಜಿಲ್ಲೆಗೆ ಕುಚ್ಚಲಕ್ಕಿ ಸರಬರಾಜು ಮಾಡುವ ತನಕ ಪಡಿತರದ ಮೂಲಕ ನೀಡುವ ಅಕ್ಕಿಯ ಮೌಲ್ಯವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮೆ ಮಾಡಿ ಅವರಿಗೆ ಬೇಕಾದ ಅಕ್ಕಿಯನ್ನು ಅವರೇ ಖರೀದಿಸಲು ರಾಜ್ಯದಲ್ಲಿಯೇ ಮೊದಲಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೈಲೆಟ್ ಯೋಜನೆ ಕೈಗೆತ್ತಿಕೊಳ್ಳಬೇಕಾಗಿ ಕೋರಲಾಯಿತು.

ಈ ಸಂದರ್ಭ ಸಚಿವ ಎಸ್.ಅಂಗಾರ, ಶಾಸಕರಾದ ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.

Edited By : Nirmala Aralikatti
PublicNext

PublicNext

18/02/2021 03:01 pm

Cinque Terre

55.73 K

Cinque Terre

2

ಸಂಬಂಧಿತ ಸುದ್ದಿ