ಬೆಂಗಳೂರು: ಡೆಡ್ಲಿ ಸೋಂಕು ತಡೆಗಾಗಿ ಸರ್ಕಾರ ಸಾಕಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೊರೊನಾ ನಿಯಮ ಉಲ್ಲಂಘನೆಗೆ ನ್ಯಾಯಾಲಯ ವಿಧಿಸಿದ್ದ 50 ಸಾವಿರ ರೂಪಾಯಿ ದಂಡ ಕಟ್ಟಲು ವಿಫಲರಾದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ 2020ರ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಈ ವೇಳೆ ಜನ ಗುಂಪು ಸೇರಿ ಸೋಂಕು ಹರಡುವ ಸನ್ನಿವೇಶ ನಿರ್ಮಾಣಕ್ಕೆ ಕಾರಣವಾದ ಆರೋಪದ ಮೇರೆಗೆ ಕೇಸ್ ದಾಖಲಿಸಲಾಗಿತ್ತು. ವಾಟಾಳ್ ನಾಗರಾಜ್ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು.
ಈ ಹಿನ್ನೆಲೆ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಠಾಣೆಯಿಂದ ನೋಟಿಸ್ ನೀಡಿ ಜನವರಿ 20ರ ಮಧ್ಯಾಹ್ನದ ಒಳಗೆ ದಂಡ ಕಟ್ಟಲು ಸೂಚಿಸಲಾಗಿತ್ತು. ದಂಡ ಕಟ್ಟಲು ವಿಫಲರಾದ ಕಾರಣ ವಾಟಾಳ್ ನಾಗರಾಜ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ.
PublicNext
23/01/2021 07:30 am