ಜಮ್ಮು- ಕಾಶ್ಮೀರ : ಡೆಡ್ಲಿ ಸೋಂಕು ಬಂದ ಬಳಿಕ ತನ್ನ ಪತ್ನಿಗೆ ಚುಂಬನ ಕೂಡ ಕೊಟ್ಟಿಲ್ಲ ಎಂದು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ಧುಲ್ಲಾ ಹೇಳಿದ್ದಾರೆ.
ಜಮ್ಮುವಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಮಾತನ್ನು ಹೇಳುವ ಮೂಲಕ ನಗೆ ಚಟಾಕಿಯನ್ನು ಹಾರಿಸಿದ್ದಾರೆ.
ಆದ್ರೆ ಇವರ ಹೇಳಿಕೆ ಇದೀಗ ಭಾರೀ ಟ್ರೋಲ್ ಗೆ ಗುರಿಯಾಗಿದೆ. " ಕೊರೊನಾ ಬಂದ ಬಳಿಕ ನಾನು ನನ್ನ ಹೆಂಡತಿಗೆ ಕಿಸ್ ಕೂಡ ಕೊಟ್ಟಿಲ್ಲ. ಹೃದಯ ತಬ್ಬಿಕೊಳ್ಳಲು ಬಯಸಿದರು ಅದುವು ಸಾಧ್ಯವಾಗಿಲ್ಲ. ಯಾರಿಗೆ ಏನಾಗುತ್ತದೆ ಎಂದು ಈ ಸಮಯದಲ್ಲಿ ಹೇಳಲು ಆಗುವುದಿಲ್ಲ ಎಂದು ಕೊರೊನಾದ ಬಗೆಗಿನ ಭಯವನ್ನು ಅವರು ವ್ಯಕ್ತಪಡಿಸಿದರು. ಇನ್ನು ತಾನು ಹೇಳಿದ ಮಾತು ನಿಜ ಎಂದು ಪುನರುಚ್ಚರಿಸಿದ್ದಾರೆ.
ಇದೆ ವೇಳೆ ದೇಶದಾದ್ಯಂತ ಆರಂಭವಾಗಿರುವ ಕೊರೊನಾ ಲಸಿಕೆ ಬಗ್ಗೆ ಮಾತನಾಡಿದ ಫಾರೂಕ್, ಕೊರೊನಾ ಲಸಿಕೆಯ ಯಶಸ್ಸಿನ ಬಗ್ಗೆ ಈಗಲೇ ಹೇಳಲಾಗದು. ಮುಂದಿನ ದಿನಗಳಲ್ಲಿ ಇದರ ಕಾರ್ಯಕ್ಷಮತೆ ಬಗ್ಗೆ ತಿಳಿಯಲಿದೆ. ಆದರೂ ನಾನು ಕೊರೊನಾ ಲಸಿಕೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಏಕೆಂದರೆ ಸದ್ಯ ಕೊರೊನಾದಿಂದ ಮುಕ್ತರಾಗಿ ಈ ಹಿಂದಿನ ಜೀವನಶೈಲಿ ಮತ್ತೆ ಬರಲಿ ಎನ್ನುವುದೆ ನಮ್ಮ ಆಶಯ ಎಂದು ತಿಳಿಸಿದರು.
PublicNext
19/01/2021 08:52 pm