ಬೆಂಗಳೂರು: ಮೊದಲ ಹಂತದಲ್ಲಿ ಡಿ ಗ್ರುಪ್ ನೌಕರರಿಗೆ ಕೊರೊನಾ ಲಸಿಕೆ ನೀಡುತ್ತಿರುವ ಬಗ್ಗೆ ಮಾಜಿ ಸಚಿವ ಯು. ಟಿ ಖಾದರ್ ಸಿಡಿಮಿಡಿಗೊಂಡಿದ್ದಾರೆ.
ಲಸಿಕೆ ಬಂದಿದ್ದು ಸಂತೋಷದ ಸಂಗತಿ. ಲಸಿಕೆ ನೀಡುತ್ತಿರುವುದೂ ಸ್ವಾಗತಾರ್ಹ. ಆದ್ರೆ ಬಡಪಾಯಿ ಡಿ ಗ್ರುಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುತ್ತಿದೆ. ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ನನ್ನ ವಿನಂತಿ ಎಂದು ಶಾಸಕ ಯು. ಟಿ ಖಾದರ್ ಟ್ವೀಟ್ ಮಾಡಿದ್ದಾರೆ.
PublicNext
16/01/2021 02:14 pm