ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂದು ಸೈನಿಕರ ಶೌರ್ಯವನ್ನ ಪ್ರಶ್ನಿಸಿದರು, ಇಂದು ಕೊರೊನಾ ಲಸಿಕೆ ಬಗ್ಗೆ ಅನುಮಾನ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ನವದೆಹಲಿ: ಭಾರತ್‌ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮತಿ ನೀಡಿದ್ದಕ್ಕೆ ಕಾಂಗ್ರೆಸ್‌ ಟೀಕಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಚಿವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಮುಖಂಡ, ಸಂಸದ ಶಶಿ ತರೂರ್ ಟ್ವೀಟ್ ಮಾಡಿ, ಕೊವಾಕ್ಸಿನ್ ಇನ್ನೂ 3ನೇ ಹಂತದ ಪ್ರಯೋಗಕ್ಕೆ ಒಳಪಟ್ಟಿಲ್ಲ. ಅವಧಿಗೂ ಮುನ್ನ ಲಸಿಕೆ ಹಾಕಲು ಅನುಮತಿ ನೀಡಿರುವುದು ಅಪಾಯಕಾರಿ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಇದನ್ನು ದಯವಿಟ್ಟು ಸ್ಪಷ್ಟಪಡಿಸಬೇಕು. ಪೂರ್ಣ ಪ್ರಯೋಗಗಳು ಮುಗಿಯುವವರೆಗೆ ಇದರ ಬಳಕೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಈ ಮೊದಲು ಕಾಂಗ್ರೆಸ್ಸಿಗರು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸಿದ್ದರು. ಈಗ ಸ್ವದೇಶಿಯವಾಗಿ ತಯಾರಿಸಿದ 2 ಲಸಿಕೆಗೆ ಡಿಜಿಸಿಐ ಅನುಮೋದನೆ ನೀಡಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಕುಟುಕಿದ್ದಾರೆ.

ಬಿಜೆಪಿ ಮುಖ್ಯಸ್ಥ ಅಮಿತ್ ಮಾಳವೀಯಾ ಟ್ವೀಟ್ ಮಾಡಿ, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮಾಡುತ್ತಿರುವ ಟೀಕೆ ಭಯವನ್ನುಂಟು ಮಾಡಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆಯೂ ಪೋಲಿಯೋ ಲಸಿಕೆ ನೀಡುವಾಗ ಪ್ರಶ್ನೆ ಮಾಡಿದ್ದರು. ಈಗ ಕೊರೊನಾ ವೈರಸ್‌ಗೆ ಹೆಚ್ಚಿನ ಜನ ಸಾಯಲಿ ಎನ್ನುವುದು ಪ್ರತಿಪಕ್ಷಗಳ ಬಯಕೆ ಇದ್ದಂತಿದೆ ಎಂದು ಟೀಕಿಸಿದ್ದಾರೆ.

Edited By : Vijay Kumar
PublicNext

PublicNext

03/01/2021 09:34 pm

Cinque Terre

119.69 K

Cinque Terre

12

ಸಂಬಂಧಿತ ಸುದ್ದಿ