ಮಿಲಾನ್: ಡೆಡ್ಲಿ ಸೋಂಕಿಗೆ ನಲುಗದ ದೇಶವಿಲ್ಲ ಮಹಾಮಾರಿ ಅಟ್ಟಹಾಸಕ್ಕೆ ಜನ ತತ್ತರಿಸಿ ಹೋಗಿದ್ದಾರೆ ಕೆಲವು ದೇಶಗಳು ಸುಧಾರಿಸಿಕೊಳ್ಳಲಾಗದ ಹಂತ ತಲುಪಿವೆ. ಈ ರೀತಿ ಸಂಕಷ್ಟದಲ್ಲಿ ಸಿಲುಕಿರುವ ದೇಶಗಳಲ್ಲಿ ಇಟಲಿಯೂ ಒಂದು. ಈಗಾಗಲೇ ಇಟಲಿಯಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯ ಪ್ರಧಾನಿ ಗಿಸೆಪ್ಪೆ ಕಾಂಟೆ ಡೆಡ್ಲಿ ಸೋಂಕು ನಿವಾರಣೆ ಮತ್ತು ಹರಡುವಿಕೆಯನ್ನು ತಡೆಯಲು ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದರೂ ಪರಿಸ್ಥಿತಿ ಮಾತ್ರ ಕಂಟ್ರೋಲಿಗೆ ಬರುತ್ತಿಲ್ಲ.
ಸದ್ಯ ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿಗಳು ವಿಫಲರಾಗಿರುವ ಟೀಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ತಮ್ಮ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಅಧ್ಯಕ್ಷ ಸೆರ್ಗಿಯೋ ಮ್ಯಾಟೆರೆಲ್ಲ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಟಲಿಯ ನಿಯಮದ ಪ್ರಕಾರ, ಪ್ರಧಾನಿಯಾದವರು ರಾಜೀನಾಮೆ ನೀಡಿದ ನಂತರ ಅಧ್ಯಕ್ಷರು ಹೊಸ ಸರ್ಕಾರ ರಚನೆಗೆ ಆದೇಶ ನೀಡುತ್ತಾರೆ. ಅದು ವಿಫಲವಾದಲ್ಲಿ, ಮತ್ತೊಬ್ಬರಿಗೆ ಈ ಅವಕಾಶ ನೀಡಲಾಗುತ್ತದೆ. ಅದೂ ವಿಫಲವಾದರೆ ಹೊಸದಾಗಿ ಚುನಾವಣೆ ನಡೆಯುತ್ತದೆ.
PublicNext
27/01/2021 11:35 am