ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಕೋವಿಶೀಲ್ಡ್‌ಗೆ ಅನುಮತಿ ನೀಡಿದ ಬ್ರಿಟನ್: ಲಸಿಕೆ ನೀತಿಯಲ್ಲಿ ಸಡಿಲಿಕೆ

ಭಾರತದ ನೀಡಿದ ಎಚ್ಚರಿಕೆಯ ಬಳಿಕ ಬ್ರಿಟನ್ ಮತ್ತೆ ತನ್ನ ಲಸಿಕೆ ನೀತಿಯನ್ನು ಬದಲಾಯಿಸಿದೆ. ಬ್ರಿಟನ್ ಇದೀಗ ತನ್ನ ಹೊಸ ಪ್ರಯಾಣ ನಿಯಮಗಳಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕರೋನಾ ಲಸಿಕೆ 'ಕೋವಿಶೀಲ್ಡ್'ಗೆ ಅನುಮೋದನೆ ನೀಡಿದೆ. ಆದರೆ ಯುಕೆಗೆ ಹೋಗುವ ಭಾರತೀಯರು ಭಾರತದ ಲಸಿಕೆ ಪ್ರಮಾಣಪತ್ರವನ್ನು ಅನುಮೋದಿಸದ ಕಾರಣ, ಇನ್ನೂ ನಿರ್ಬಂಧಿತರಾಗಿರಬೇಕಾಗುತ್ತದೆ. ಈ ಮೊದಲು, ಲಸಿಕೆ ನೀತಿಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಭಾರತ ಬ್ರಿಟನ್‌ಗೆ ಎಚ್ಚರಿಕೆ ನೀಡಿತ್ತು.

ಬ್ರಿಟನ್ ಗೆ ಎಚ್ಚರಿಕೆ ನೀಡಿದ್ದ ಭಾರತ ಇದಕ್ಕೂ ಮೊದಲು ಲಸಿಕೆ ನೀತಿಯ ಬಗ್ಗೆ ಭಾರತ ಬ್ರಿಟನ್‌ಗೆ ಎಚ್ಚರಿಕೆ ನೀಡಿತ್ತು. ಭಾರತದ ಆತಂಕವನ್ನು ಅಕ್ಟೋಬರ್ 4 ರೊಳಗೆ ಪರಿಹರಿಸದಿದ್ದರೆ, ಬ್ರಿಟನ್‌ನಿಂದ ಬರುವ ಪ್ರಯಾಣಿಕರ ಬಗ್ಗೆಯೂ ಇದೇ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದರು. ಹರ್ಷವರ್ಧನ್ ಶೃಂಗ್ಲಾ ಬ್ರಿಟನ್‌ನ ಈ ನೀತಿಯನ್ನು ತಾರತಮ್ಯದಿಂದ ಕೂಡಿದೆ ಎಂದು ಹೇಳಿದ್ದರು.

Edited By : Nagaraj Tulugeri
PublicNext

PublicNext

22/09/2021 04:28 pm

Cinque Terre

61.74 K

Cinque Terre

0

ಸಂಬಂಧಿತ ಸುದ್ದಿ