ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಲೀಸ್ ನಮ್ಮ ರಕ್ತವನ್ನು ಉಳಿಸಿ!: ಸಂಸತ್ತಿನ ಹೊರಾಂಗಣದಿಂದ 'ಕೈ' ಸಂಸದನ ಮನವಿ

ನವದೆಹಲಿ: ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದ ಮಾಣಿಕ್ಯಮ್ ಠಾಗೋರ್ ಅವರು ಕೇಂದ್ರ ಸರಕಾರದ ನಡೆ ವಿರೋಧಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಸಂಸತ್ತಿನ ಮುಂದೆ ತಮ್ಮೊಂದಿಗೆ ಪ್ರತಿಭಟನೆಗೆ ಕುಳಿತ ಸಂಸದರೊಬ್ಬರಿಗೆ ಸೊಳ್ಳೆ ಕಚ್ಚಿದೆ. ಇದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ 'ದಯವಿಟ್ಟು ನಮ್ಮ ರಕ್ತ ಉಳಿಸಿ' ಎಂದು ಮನವಿ ಮಾಡಿದ್ದಾರೆ.

“ಸಂಸತ್ತಿನಲ್ಲಿ ಸೊಳ್ಳೆಗಳಿವೆ. ಆದರೆ ಈ ಸೊಳ್ಳೆಗಳಿಗೆ ವಿರೋಧ ಪಕ್ಷದ ಸಂಸದರು ಹೆದರುವುದಿಲ್ಲ. ಮನ್ಸುಖ್ ಮಾಂಡವೀಯ ಜೀ ದಯವಿಟ್ಟು ಸಂಸತ್ತಿನಲ್ಲಿ ಭಾರತೀಯರ ರಕ್ತವನ್ನು ರಕ್ಷಿಸಿ, ಇಲ್ಲಿಂದ ನಮ್ಮ ರಕ್ತವನ್ನು ಅದಾನಿ ಹೀರುತ್ತಿದ್ದಾರೆ ಎಂದಿರುವ ಮಾಣಿಕ್ಯಮ್ ಠಾಗೋರ್, #ParliamentMonsoonSession” ಎಂದು ಆರೋಗ್ಯ ಸಚಿವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

28/07/2022 11:54 am

Cinque Terre

91.15 K

Cinque Terre

14