ಭುವನೇಶ್ವರ: ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ 2ನೇ ರೂಪ ತಾಳಿ ಅಬ್ಬರಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಕೇರಳದಲ್ಲಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಆದರೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ತಮ್ಮ ರಾಜ್ಯದ ಜನರಿಗೆ ಒಡಿಶಾ ಸರ್ಕಾರ ಭರ್ಜರಿ ಎಚ್ಚರಿಕೆ ಕೊಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಡಿಶಾ ಆರೋಗ್ಯ ಸಚಿವ ಪಿ.ಕೆ. ಮೋಹಪಾತ್ರ, ''ಬಲವಾದ ಕಾರಣವಿಲ್ಲದೆ ಲಸಿಕೆ ತೆಗದುಕೊಳ್ಳಲು ನಿರಾಕರಿಸಿದರೆ ಈಗ ನೀಡುತ್ತಿರುವ ಸೌಲಭ್ಯಗಳಿಂದ ವಂಚಿತರಾಗ್ತೀರಿ'' ಎಂದು ರಾಜ್ಯದ ಆರೋಗ್ಯ ಸಿಬ್ಬಂದಿ ಮತ್ತು ಫ್ರಂಟ್ಲೈನ್ ವರ್ಕರ್ಸ್ಗೆ ಬಿಸಿ ಮುಟ್ಟಿಸಿದ್ದಾರೆ.
''ಕೊರೊನಾ ಲಸಿಕೆ ತೆಗೆದುಕೊಳ್ಳಲು ಅನೇಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದೀರಿ. ಆದರೆ ಇದೀಗ ಬಲವಾದ ಕಾರಣವಿಲ್ಲದೇ ವಿನಾಕಾರಣ ಲಸಿಕೆ ತೆಗದುಕೊಳ್ಳಲು ನಿರಾಕರಿಸುತ್ತಿರುವವರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ವಿಶೇಷ ಸೌಲಭ್ಯಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದು. ರಾಜ್ಯ ಸರ್ಕಾರ ಸೋಂಕಿಗೊಳಗಾದ ಆರೋಗ್ಯ ಸಿಬ್ಬಂದಿ ಮತ್ತು ಫ್ರಂಟ್ಲೈನ್ ವರ್ಕರ್ಗಳು, ಉಚಿತ ಚಿಕಿತ್ಸೆ, ಚಿಕಿತ್ಸೆ ವೇಳೆ ನೀಡಲಾದ ವೇತನ ಸಹಿತ ರಜೆ, ಹಣಕಾಸು ಮತ್ತು ಇತರೆ ವಿಶೇಷ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಒಡಿಶಾದಲ್ಲಿ ಲಸಿಕೆಗಾಗಿ ನೋಂದಾಯಿಸಿಕೊಂಡಿರುವ ಒಟ್ಟು 5.43 ಲಕ್ಷ ಆರೋಗ್ಯ ಸಿಬ್ಬಂದಿ ಹಾಗೂ ಫ್ರಂಟ್ಲೈನ್ ವರ್ಕರ್ಸ್ ಪೈಕಿ ಇನ್ನೂ 90,000 ಮಂದಿ ವ್ಯಾಕ್ಸಿನ್ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.
PublicNext
24/02/2021 07:40 am