ಪುದುಚೇರಿ: ಪುದುಚೇರಿಯಲ್ಲಿ ಕೊರೊನಾ ಸೋಂಕಿನ ತೀವ್ರತೆ ವಿರುದ್ಧ ಅಲ್ಲಿನ ಸರ್ಕಾರ ಹೋರಾಡುತ್ತಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಕೊರೊನಾ ಲಸಿಕೆ ಪಡೆಯುವುದನ್ನು ಅಲ್ಲಿ ಕಡ್ಡಾಯಗೊಳಿಸಲಾಗಿದೆ. ಆದರೂ ಕೆಲವರು ಲಸಿಕೆ ಪಡೆಯದೇ ಉಳಿದಿದ್ದಾರೆ. ಅಂತವರಿಗಾಗಿ ಪುದುಚೇರಿ ಸರ್ಕಾರ ಹೊಸ ರೂಲ್ಸ್ ತಂದಿದೆ.
ಸಾರ್ವಜನಿಕ ಆರೋಗ್ಯ ಕಾಯ್ದೆ 1973 ರ ಸೆಕ್ಷನ್ 8 ಮತ್ತು 54(1)ರ ಅಡಿಯಲ್ಲಿ ಪುದುಚೇರಿಯಲ್ಲಿ ಪ್ರತಿಯೊಬ್ಬರೂ ಕೊರೊನಾ ಪ್ರತಿಬಂಧಕ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಈ ಕಾನೂನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ.
PublicNext
05/12/2021 05:11 pm