ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ ಅಧಿವೇಶನ ರದ್ದುಗೊಳಿಸುವಂತೆ ಸಚಿವಾಲಯ ನೌಕರರ ಸಂಘ ಒತ್ತಾಯ

ಬೆಂಗಳೂರು: ಕೊರೊನಾ ರೂಪಾಂತರಿ ಓಮೈಕ್ರಾನ್ ವೈರಸ್ ಭೀತಿ ರಾಜ್ಯಾದ್ಯಂತ ಆವರಿಸಿದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಅಧಿವೇಶನವನ್ನು ರದ್ದುಗೊಳಿಸಬೇಕು. ಎಂದು ಸಚಿವಾಲಯ ನೌಕರರ ಸಂಘ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದಾರೆ.

ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಈ ಕುರಿತು ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಬೆಳಗಾವಿ ನಗರವು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಭಾಗವಾಗಿದೆ. ಹೀಗಾಗಿ ಅಲ್ಲಿಗೆ ನಿತ್ಯ ಅಂತರಾಜ್ಯ ಪ್ರಯಾಣಿಕರು ಬರುತ್ತಾರೆ. ಈ ವೇಳೆ ಅಲ್ಲಿ ನೌಕರರು, ಜನಪ್ರತಿನಿಧಿಗಳು ಒಂದೇ ಕಡೆ ಸೇರುವುದು ಓಮೈಕ್ರಾನ್ ಸೋಂಕು ಹರಡಲು ಕಾರಣವಾಗಬಹದು. ಮುಂಜಾಗೃತಾ ಕ್ರಮವಾಗಿ ಸರ್ಕಾರವು ಡಿಸೆಂಬರ್ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

02/12/2021 07:59 am

Cinque Terre

38.94 K

Cinque Terre

4

ಸಂಬಂಧಿತ ಸುದ್ದಿ