ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ನೈಟ್‌ ಕರ್ಫ್ಯೂ ಕ್ಯಾನ್ಸಲ್, ಶಾಲೆ ಪುನಾರಂಭಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು: ಕೊರೊನಾ ಆತಂಕದಿಂದ ರಾಜ್ಯದಲ್ಲಿ ಹೇರಲಾಗಿದ್ದ ನಿಯಮಗಳನ್ನು ರಾಜ್ಯ ಸರ್ಕಾರವು ಸಡಿಲಗೊಳಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಜನವರಿ 31ರಿಂದ ನೈಟ್‌ ಕರ್ಫ್ಯೂ ಜಾರಿಯನ್ನು ಹಿಂಪಡೆಯಲಾಗಿದೆ. ಆದರೆ ಜಾತ್ರೆ, ರ್ಯಾಲಿ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ ಎಂದು ತಿಳಿಸಲಾಗಿದೆ.

ಯಾವುದಕ್ಕೆ ಅನುಮತಿ ಇಲ್ಲಿದೆ ಮಾಹಿತಿ:

* ಜನವರಿ 31ರಿಂದ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಇರಲ್ಲ

* ಬೆಂಗಳೂರಿನಲ್ಲಿ ಶಾಲೆ ಆರಂಭಕ್ಕೆ ಗ್ರೀನ್​ ಸಿಗ್ನಲ್​ .

* ಪಬ್, ರೆಸ್ಟೋರೆಂಟ್‌, ಹೋಟೆಲ್‌ ಓಪನ್‌ ಇರುತ್ತೆ.

* ಚಿತ್ರ ಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ 50% ಸಾಮರ್ಥ್ಯ ಮುಂದುವರಿಕೆ

* ಶೇ. 50 ಸಾಮರ್ಥ್ಯದೊಂದಿಗೆ ಜಿಮ್, ಈಜುಕೊಳ ಓಪನ್​ಗೆ ಅವಕಾಶ

* ಮದುವೆ ಕಾರ್ಯಕ್ರಮಗಳಲ್ಲಿ ಒಳಾಂಗಣದಲ್ಲಿ 200, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ

* ದೇವಸ್ಥಾನಗಳಲ್ಲಿ ಅರ್ಚನೆ, ಮಂಗಳಾರತಿಗೆ ಅವಕಾಶ

* ದೇವಸ್ಥಾನಗಳಲ್ಲಿ 50 ಜನರಿಗೆ ಮಾತ್ರ ಅವಕಾಶ

* ಸರ್ಕಾರಿ ಕಚೇರಿಗಳಲ್ಲಿ ಶೇ. 100 ರಷ್ಟು ಹಾಜರಾತಿಗೆ ಅನುಮತಿ

* ಸಾರಿಗೆ ವ್ಯವಸ್ಥೆಯಲ್ಲಿ ಈಗಿರುವ ನಿಯಮಗಳೇ ಮುಂದುವರಿಕೆ

* ಸೋಮವಾರದಿಂದ ಎಲ್ಲಾ ತರಗತಿಗಳು ಆರಂಭ

* ಮಕ್ಕಳಿಗೆ ಸೋಂಕು ಬಂದ್ರೆ ಆ ತರಗತಿ ಮಾತ್ರ ಬಂದ್

* ಶಾಲೆ ಮುಚ್ಚುವ ಬಗ್ಗೆ ಡಿಸಿ ನಿರ್ಧಾರ ಮಾಡುತ್ತಾರೆ

* ಪ್ರವಾಸಿ ತಾಣಗಳಿಗೆ ಮುಕ್ತ ಅವಕಾಶ

Edited By : Vijay Kumar
PublicNext

PublicNext

29/01/2022 01:48 pm

Cinque Terre

133.4 K

Cinque Terre

14

ಸಂಬಂಧಿತ ಸುದ್ದಿ