ಕೋಲ್ಕತ್ತಾ: ಒಂದು ವೇಳೆ ನಾನು ಕೊರೋನಾ ಸೋಂಕಿಗೆ ಒಳಗಾಗಿದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹೊಸದಾಗಿ ನೇಮಕಗೊಂಡಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ಗೆ ಈಗ ಕೋವಿಡ್-19 ಸೋಂಕು ದೃಢವಾಗಿದೆ.
ಇದೀಗ ಅನುಪಮ್ ಹಜ್ರಾ ಅವರಿಗೆ ಕೊರೊನಾ ಪಾಸಿಟಿವ್ ಎಂದು ಅಲ್ಲಿನ ಆರೋಗ್ಯಧಿಕಾರಿಗಳು ದೃಢಪಡಿಸಿದ್ದು, ರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ವರದಿಯಲ್ಲಿ ಹಜ್ರಾ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಹಜ್ರಾ ಅವರನ್ನು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ರೋಗಿಗಳ ಶವಗಳನ್ನು ಅಂತ್ಯಕ್ರಿಯೆ ನಡೆಸುವ ರೀತಿ ಕರುಣಾಜನಕವಾಗಿದೆ, ಮೃತದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಗುತ್ತಿದೆ, ನಾವು ಸತ್ತ ಬೆಕ್ಕುಗಳನ್ನು ಅಥವಾ ನಾಯಿಗಳನ್ನು ಸಹ ಆ ರೀತಿ ಪರಿಗಣಿಸುವುದಿಲ್ಲ. ಕೋವಿಡ್-19 ನಿಂದ ಮೃತಪಟ್ಟ ಪೋಷಕರ ಮುಖಗಳನ್ನು ಮಕ್ಕಳಿಗೆ ತೋರಿಸುತ್ತಿಲ್ಲ ಎಂದು ಹಜ್ರಾ ಕಿಡಿಕಾರಿದ್ದರು.
ಒಂದು ವೇಳೆ ನನಗೆ ಕೊರೋನಾವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳಲು ತಬ್ಬಿಕೊಳ್ಳುತ್ತೇನೆ, ಕೋವಿಡ್ ರೋಗಿಗಳ ಕುಟುಂಬಗಳ ನೋವನ್ನು ಅನುಭವಿಸುವಂತೆ ಮಾಡುವುದಾಗಿ ಹಜ್ರಾ ತಿಳಿಸಿದ್ದರು.
ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ಪೊಲೀಸ್ ದೂರು ದಾಖಲಿಸಿದ್ದರು.
PublicNext
03/10/2020 08:39 am