ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ಬಂದೂಕಿನಿಂದ ನಟ ಯಶ್ ಸಿಗರೇಟ್ ಹಚ್ಚಿರುವ ದೃಶ್ಯ ಭಾರೀ ಫೇಮಸ್ ಆಗಿದೆ. ಇದರ ಬೆನ್ನಲ್ಲೇ ಆ ದೃಶ್ಯಕ್ಕೆ ತೀವ್ರ ವಿರೋಧವೂ ಕೇಳಿ ಬಂದಿದೆ. ಈ ದೃಶ್ಯವನ್ನು ತೆಗೆಯಿರಿ ಎಂದು ಆರೋಗ್ಯ ಇಲಾಖೆಯಿಂದ ನೋಟಿಸ್ ಕೂಡ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ. ಸುಧಾಕರ್, ನಟರನ್ನು ಸಾವಿರಾರು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಹಾಗಾಗಿ ಯಶ್ ಸೇರಿ ಇತರ ನಟರಿಗೂ ಆರೋಗ್ಯ ಇಲಾಖೆಯಿಂದ ಮನವಿ ಮಾಡುತ್ತಿದ್ದೇವೆ. ಇಂಥ ದೃಶ್ಯಗಳನ್ನು ತೋರಿಸಬಾರದು ಎಂದಿದ್ದಾರೆ.
ದೇಶದಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ಆದಷ್ಟು ಸಿಗರೇಟ್ ಸೇದುವ ದೃಶ್ಯಗಳನ್ನು ತೋರಿಸಬಾರದು. ಜನರು ನಟನನ್ನು ಅನುಕರಿಸುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಹ ದೃಶ್ಯಗಳು ಇರಬೇಕು ಹೊರತು, ಇಂಥದ್ದನ್ನೆಲ್ಲ ತೋರಿಸಬಾರದು ಎಂದು ಹೇಳಿದ್ದಾರೆ.
PublicNext
13/01/2021 02:14 pm