ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ 4ನೇ ಅಲೆ ಬಂದರೂ ಶಾಲೆ ಬಂದ್ ಆಗೋದಿಲ್ಲ:ಬಿ.ಸಿ.ನಾಗೇಶ್

ಬೆಂಗಳೂರು: ಕೋವಿಡ್ ನಾಲ್ಕನೆ ಅಲೆ ಭೀತಿಯಿಂದ ಶಾಲೆಗಳು ಏನೂ ಬಂದ್ ಆಗೋದಿಲ್ಲ. ಮೊದಲೇ ನಿರ್ಧರಿಸಿರೋವಂತೆ ಮೇ-16 ರಂದು ಶಾಲೆಗಳು ಆರಂಭ ಆಗುತ್ತಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಜೂನ್-ಜುಲೈನಲ್ಲಿ ಕೋವಿಡ್ ನಾಲ್ಕನೆ ಅಲೆ ಬರುತ್ತದೆ ಅಂತಲೇ ಹೇಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸಭೆ ಮಾಡಿದ್ದಾರೆ ಎಂದು ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನ ಕೊಡುತ್ತದೆ. ಅದನ್ನ ನಾವು ಸರಿಯಾಗಿಯೇ ಫಾಲೋ ಮಾಡುತ್ತವೇ. ಆದರೆ, ಶಾಲೆಯನ್ನ ಈ ವಿಚಾರದಲ್ಲಿ ಬಂದ್ ಮಾಡೋದಿಲ್ಲ ಅಂತಲೇ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

Edited By :
PublicNext

PublicNext

26/04/2022 05:19 pm

Cinque Terre

61.73 K

Cinque Terre

1

ಸಂಬಂಧಿತ ಸುದ್ದಿ