ಬೆಂಗಳೂರು: ಸಂಕ್ರಾಂತಿ ಸೇರಿದಂತೆ ವಿವಿಧ ಹಬ್ಬಗಳ ಆಚರಣೆಗೆ ಪ್ರತ್ಯೇಕ ಗೈಡ್ ಲೈನ್ಸ್ ಬರುವ ಸಂಭವ ಇದೆ.
ದಿನದಿಂದ ದಿನಕ್ಕೆ ಕೊರೊನಾ ಕೇಸ್ ಹೆಚ್ಚಳವಾದ ಹಿನ್ನೆಲೆ ಧಾರ್ಮಿಕ ಹಬ್ಬಗಳಿಗೂ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಹಬ್ಬದ ವೇಳೆ ಹೆಚ್ಚು ಜನರು ಸೇರುವುದರಿಂದ ಕೊರೊನಾ ಸೋಂಕು ಹೆಚ್ಚಬಹುದು.ಹೀಗಾಗಿ ದೇವಾಲಯಗಳಲ್ಲಿ ಹೆಚ್ಚು ಮುಂಜಾಗೃತೆ ವಹಿಸಬೇಕು.
ಎರಡು ದಿನದಲ್ಲಿ ಹೊಸ ಗೈಡ್‌ಲೈನ್ಸ್ ಬರುವ ಸಾಧ್ಯತೆಯಿದ್ದು,ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬಗಳಲ್ಲಿ ಹೆಚ್ಚುವ ಜನಸಂದಣಿ ತಡೆಯಲು ಮತ್ತಷ್ಟು ನಿರ್ಬಂಧ ನೆಗಳನ್ನು ತರಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಾಲು ಸಾಲು ಜಾತ್ರಾ ಮಹೋತ್ಸವಗಳು ಇರುವ ಹಿನ್ನೆಲೆ ಹೊಸ ಗೈಡ್ ಲೈನ್ ತರಲು ಚಿಂತನೆ ನಡೆದಿದ್ದು, ಗೈಡ್‌ಲೈನ್ಸ್ ಬಂದರೆ ಬಹುತೇಕ ದೇವಾಲಯದಲ್ಲಿ ಹಬ್ಬದ ದಿನ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲ.
PublicNext
11/01/2022 04:33 pm