ಬೆಂಗಳೂರು: ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನ ಮೇಕೆದಾಟು ಪಾದಯಾತ್ರೆಗೆ ಕರೆದು ಕಾಂಗ್ರೆಸ್ ನವ್ರು ಕೊರೊನಾ ಸೋಂಕು ಅಂಟಿಸಿ ಕಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ,ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೊರೊನಾ ತಡೆಗಟ್ಟಲೆಂದೇ ಕೋವಿಡ್ ರೂಲ್ಸ್ ಟಫ್ ಮಾಡಲಾಗಿದೆ. ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಆದರೆ ಈಗ ರೇವಣ್ಣ ಅವರಿಗೆ ಕೋವಿಡ್ ಬಂದಿದೆ. ಇದನ್ನ ನಾವು ಮಾಡಿರೋದಾ ? ಕಾಂಗ್ರೆಸ್ ನವರೇ ಮಾಡಿರೋದು ಅಲ್ವೇ ಇದು..? ಹೀಗೆ ಪ್ರಶ್ನೇಗಳನ್ನ ಕೇಳಿದ್ದಾರೆ ಸಚಿವ ಆರಗ ಜ್ಞಾನೇಂದ್ರ.
ಕೋವಿಡ್‌ಗೆ ಸಂಬಂಧಿಸಿದಂತೆ ಬೆಂಗಳೂರು ರಕ್ಷೆಣೆಗೆ ಸಂಬಂಧಿಸಿದಂತೆ ಒಂದಷ್ಟು ಚರ್ಚೆ ಆಗುತ್ತಿದೆ. ಆದರೆ ನಾನು ಡಿಕೆಶಿವಕುಮಾರ್ ಅವರ ಬಾಡಿಲ್ಯಾಂಗ್ವೇಜ್ ಬಗ್ಗೆ ಏನೂ ಹೇಳೋದಿಲ್ಲ. ಜನರಿಗೆ ಅವರ ಬಾಡಿಲ್ಯಾಂಗ್ವೇಜ್ ಬಗ್ಗೆ ತಿಳಿದಿದೆ ಅಂತಲೇ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ರೇಣುಕಾಚಾರ್ಯ ಅವರೂ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.ಇಂದು ಬೆಳಗ್ಗೆ ಇಲ್ಲಿಗೆ ಬಂದಿದ್ದರು.ಆ ವಿಷಯದ ಬಗ್ಗೆ ಕೇಳಿದ್ದೇನೆ. ಅವರ ವಿರುದ್ಧವೂ ಸೂಕ್ತ ಕ್ರಮಕೈಗೊಳ್ಳಲಾಗುವುದು ಅಂತಲೇ ಗೃಹ ಸಚಿವರು ತಿಳಿಸಿದ್ದಾರೆ.
PublicNext
11/01/2022 02:06 pm