ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕರ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಇದರ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವತಃ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಇತ್ತೀಚಿನ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ಇದಕ್ಕೆ ಯಾರು ಕೇಸ್ ಹಾಕ್ತಾರೆ? ಯಾರು ಕ್ರಮ ಕೈಗೊಳ್ತಾರೆ ಎಂದು ಪ್ರಶ್ನಿಸಿದೆ.
ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಇಲ್ಲ. ಜಾತ್ರೆ ನಿಲ್ಲಿಸಿಲ್ಲ. ಆದ್ರೆ ನೀರಿಗಾಗಿ ಹೋರಾಟ ಮಾಡಿದವರ ಮೇಲೆ ಕೇಸ್ ದಾಖಲಿಸುತ್ತಾರಂತೆ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಗೃಹ ಸಚಿವರ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದೆ.
PublicNext
10/01/2022 07:47 pm