ಮಕ್ಕಳ ಜೀವದೊಂದಿಗೆ ಡಿಕೆಶಿ ಚೆಲ್ಲಾಟ: ಸಿ.ಟಿ ರವಿ ಆರೋಪ
ರಾಮನಗರ: ಸದ್ಯ ಮೇಕೆದಾಟು ಯೋಜನೆಗಾಗಿ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಥಳೀಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಹಾಗೂ ನೂರಾರು ಮಕ್ಕಳ ಗುಂಪಿನ ನಡುವೆ ಕುಳಿತು ಮಕ್ಕಳಿಂದ ಘೋಷಣೆ ಹಾಕಿಸಿದ್ದಾರೆ.
ಈ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, "ಹತಾಶೆಗೊಂಡಿರುವ ಕಾಂಗ್ರೆಸ್ ನಾಯಕ ವ್ಯಾಕ್ಸಿನೇಷನ್ ಆಗಿರದ ಮಕ್ಕಳ ನಡುವೆ ಕುಳಿತು ಅವರ ಅಮೂಲ್ಯ ಜೀವವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ" ಅಷಎಂದು ಬರೆದುಕೊಂಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶಿತವಾಗಿದೆ. "ಮಾನ್ಯ ಡಿಕೆಶಿ ಅವರೇ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ. ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣವಾದ ಕೆಮ್ಮು ನಿಮ್ಮನ್ನು ನಿನ್ನೆ ಬಾಧಿಸಿತ್ತು. ಇಂದು ನೀವು ಯಾವುದೇ ಮುಂಜಾಗ್ರತೆ ಇಲ್ಲದೆ ಮುಗ್ಧ ಮಕ್ಕಳೊಂದಿಗೆ ಬೆರೆತಿದ್ದೀರಿ. ಇದು ಕೋವಿಡ್ ಸೋಂಕಿಗೆ ಕಾರಣವಾದರೆ ನೀವು ಹೊಣೆ ಹೊರುತ್ತೀರಾ?"ಎಂದು ಟ್ವೀಟ್ ಮಾಡಿರುವ ಬಿಜೆಪಿ ಡಿ.ಕೆ ಶಿವಕುಮಾರ್ ನಡೆಯನ್ನು ತೀವ್ರವಾಗಿ ಖಂಡಿಸಿದೆ.
PublicNext
10/01/2022 06:40 pm