ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಪತ್ನಿ ಡಾ. ಕಮಲ್‌ಜಿತ್ ಕೌರ್, ಮಗ ನವಜಿತ್ ಸಿಂಗ್ ಮತ್ತು ಸೊಸೆ ಸಿಮ್ರಧೀರ್ ಕೌರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮೊಹಾಲಿ ಸಿವಿಲ್ ಸರ್ಜನ್ ಆದರ್ಶಪಾಲ್ ಕೌರ್ ಮಾಹಿತಿ ನೀಡಿದ್ದಾರೆ.
ಪಂಜಾಬ್ ಸಿಎಂ ಪತ್ನಿ, ಪುತ್ರ, ಸೊಸೆಯನ್ನು ಸದ್ಯ ಖರಾರ್‌ನ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಮುಖ್ಯಮಂತ್ರಿ ಚನ್ನಿ ಅವರ ಕೋವಿಡ್ ಪರೀಕ್ಷೆಯ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಆದರ್ಶಪಾಲ್ ಹೇಳಿದ್ದಾರೆ.
PublicNext
08/01/2022 03:34 pm