ಬೆಂಗಳೂರು : ಟಫ್ ರೂಲ್ಸ್ ಮಾಡಿರೋ ಸೋ ಕಾಲ್ಡ್ ಬಿಜೆಪಿ ಸರ್ಕಾರ ರಾಜ್ಯದ ಬಡಪಾಯಿಗಳಿಗೆ ಮಾತ್ರನಾ ಟಫ್ ರೂಲ್ಸ್ ಜಾರಿ ಮಾಡಿದೆ. ಆದರೆ ಈ ರೂಲ್ಸ್ ಗಳು ರೂಲ್ಸ್ ಮಾಡೋರಿಗೆ ಅನ್ವಯವಾಗೋದಿಲ್ವಾ ಎಂದು ಕನಕಪುರ ಬಂಡೆ ಡಿಕೆಶಿ ಗುಡುಗಿದ್ದಾರೆ.
ಕೋವಿಡ್ ನಿಯಮಗಳು ಸಿಎಂ ಬೊಮ್ಮಾಯಿ ಇದ್ದ ಕಾರ್ಯಕ್ರಮದಲ್ಲೇ ಫಾಲೋ ಮಾಡ್ತಿಲ್ಲ . ಸಾಮಾಜಿಕ ಅಂತರ ಇಲ್ಲ, ಸರಿಯಾಗಿ ಮಾಸ್ಕ್ ಧರಿಸಿಲ್ಲ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದಿದ್ದ ಎಂಎಲ್ ಸಿ ಪ್ರಮಾಣ ವಚನ ಕಾರ್ಯಕ್ರಮದ ಬಗ್ಗೆ ಡಿಕೆಶಿ ಕಿಡಿಕಾರಿದ್ದಾರೆ.
ಇಲ್ಲ ಸಲ್ಲದ ರೂಲ್ಸ್ ಜಾರಿ ಮಾಡಿ ಬಡಪಾಯಿಗಳಿಗೆ ಕಷ್ಟಕೊಡುತ್ತಿರುವ ಸರ್ಕಾರಕ್ಕೆ ಈ ರೂಲ್ಸ್ ಅನ್ವಯಿಸುವುದಿಲ್ವಾ?, ಸಮಾರಂಭಗಳಿಗೆ , ಮದುವೆಗಳಿಗೆ ನೂರು, ಇನ್ನೂರು ಜನರಿಗೆ ಲಿಮಿಟ್ ಮಾಡಿರುವ ಗೌರ್ಮೆಂಟ್ ಸರ್ಕಾರ ಕಾರ್ಯಕ್ರಮದಲ್ಲಿ 400 ರಿಂದ 500 ಜನ ಜಮಾಯಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೀದಿ ಬದಿ ವ್ಯಾಪಾರ ಮಾಡೋ ಸಣ್ಣ ವ್ಯಾಪಾರಿಗಳಿಗೆ ದಂಡ ಹಾಕ್ತಾರೆ, ವೀಕೆಂಡ್ ಕರ್ಫ್ಯೂ ಮಾಡ್ತಾರೆ, ಜನರ ಬಾಳಲ್ಲಿ ಆಟ ಆಡ್ತಾರೆ ಆದ್ರೆ ಇದ್ಯಾವುದು ಜನಪ್ರತಿನಿಧಿಗಳಿಗೆ ಅನ್ವಯಿಸೋದೇ ಇಲ್ಲ ಸರ್ಕಾರಿ ಕಾರ್ಯಕ್ರಮದಲ್ಲೇ ಕೋವಿಡ್ ನಿಯಮಗಳಿಗೆ ಕಿಮ್ಮತ್ತೆ ಇಲ್ಲಾ ಎಂದಿದ್ದಾರೆ.
PublicNext
06/01/2022 01:43 pm