ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆಬ್ರವರಿಯಲ್ಲಿ ಒಮಿಕ್ರಾನ್ ಹೆಚ್ಚಾಗ್ತದೆ ಅನ್ನೋದು ಅಂದಾಜು ಮಾತ್ರ ಪುರಾವೆ ಇಲ್ಲ: ಸಿಎಂ

ಮೈಸೂರು:ಫೆಬ್ರವರಿಯಲ್ಲಿ ಒಮಿಕ್ರಾನ್ ಹೆಚ್ಚಾಗುತ್ತದೆ ಅನ್ನೋದು ಅಂದಾಜು. ಆದರೆ ಇದಕ್ಕೆ ಯಾವುದೇ ದಾಖಲೆಗಳೂ ಇಲ್ಲವೇ ಇಲ್ಲ. ಆದರೂ ಅಕ್ಕ-ಪಕ್ಕದ ಕೇಸ್ ತೀವ್ರತೆಯನ್ನ ಗಮನದಲ್ಲಿಟ್ಟುಕೊಂಡೇ ಈಗ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ನಿಯಮ ಜಾರಿಗೊಳಿಸಿದ್ದೇವೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ಇನ್ನು ನೈಟ್ ಕರ್ಪ್ಯೂ ಆದೇಶ ಪುನರ್ ಪರಿಶೀಲನೆ ಮಾತೇ ಇಲ್ಲ. ಎಲ್ಲವನ್ನೂ ಯೋಚಿಸಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 50-50 ಟಫ್‌ರೂಲ್ಸ್ ಗಳಿದ್ದ ಹೋಟೆಲ್ ಉದ್ಯಮಕ್ಕೆ ತೊಂದರೆ ಆಗುತ್ತಿದೆ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಯಾವುದನ್ನೂ ಬದಲಿಸಲು ಆಗೋದೇ ಇಲ್ಲ ಎಂದೇ ಬಸವರಾಜ್ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ.

Edited By : Nagesh Gaonkar
PublicNext

PublicNext

26/12/2021 04:09 pm

Cinque Terre

122.47 K

Cinque Terre

3