ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತಾಂತರ ನಿಷೇಧ ಮಸೂದೆ : ಮೇಲ್ಮನೆಯಲ್ಲಿ ನಮಗೆ ಬಹುಮತವಿಲ್ಲ

ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ, ನಮ್ಮ ನಿಲುವು ಸ್ಪಷ್ಟವಾಗಿದೆ. ಮೇಲ್ಮನೆಯಲ್ಲಿ ನಮಗೆ ಸಪೋರ್ಟ್ ಇಲ್ಲ, ಅಲ್ಲಿ ನಮ್ಮವರು ಇರಲಿಲ್ಲ, ಅವರು ಬಂದಿದ್ದರೆ ನಾವು ಅವರ ಸಪೋರ್ಟ್ ಮಾಡಿ ಎಂದು ಕೇಳುತ್ತಿದ್ದೆವು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಅನ್ನೋದನ್ನ ಮರೆತು ಕಾಂಗ್ರೆಸ್ ನವರು ಮಾತಾಡಿದ್ದಾರೆ. ಅವರ ಮನಸಿಗೆ ನೋವಾಗಿ ರಾಜೀನಾಮೆ ಸಹ ನೀಡಲು ಮುಂದಾಗಿದ್ದರು.ಆದರೆ ನಾನೇ ಅವರಿಗೆ ಕರೆ ಮಾಡಿ ಆ ರೀತಿ ನಿರ್ಧಾರ ಮಾಡಬೇಡಿ ಎಂದು ಕೇಳಿಕೊಂಡು ಅವರ ಮನವೊಲಿಸಿದ್ದೇವೆ ಎಂದರು.

ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ ವಿಚಾರದಲ್ಲಿ,ಡಾವೋಸ್ ಶೃಂಗ ಸಭೆಯೇ ಮುಂದೆ ಹೋಗಿದೆ.ಹೀಗಿರೋವಾಗ ಯಾವುದೇ ಕಾರಣಕ್ಕೂ ಮುಂದೆಯೂ ನಾನು ವಿದೇಶಿ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ವಿದೇಶದಲ್ಲಿ ಚಿಕಿತ್ಸೆ ಬಗ್ಗೆ ಸ್ಪಷ್ಟಿಕರಣ ಕೊಟ್ಟಿದ್ದಾರೆ ಸಿಎಂ.

ಒಮಿಕ್ರಾನ್ ಭೀತಿ ಸಂಬಂಧಿಸಿದಂತೆ ಬೆಂಗಳೂರಿಗೆ ಹೋಗಿ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ.

Edited By : Manjunath H D
PublicNext

PublicNext

25/12/2021 11:46 am

Cinque Terre

51.08 K

Cinque Terre

1

ಸಂಬಂಧಿತ ಸುದ್ದಿ