ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಸಿಎಂ ನೇತೃತ್ವದಲ್ಲಿ ಸಭೆ: ಓಮೈಕ್ರಾನ್ ಕಟ್ಟಿಹಾಕಲು ಮಾರ್ಗಸೂಚಿ ಜಾರಿ ಸಾಧ್ಯತೆ

ಬೆಂಗಳೂರು: ಮಾರಣಾಂತಿಕ ಓಮೈಕ್ರಾನ್ ವೈರಾಣು ರಾಜ್ಯದ ಇಬ್ಬರಲ್ಲಿ ಕಾಣಿಸಿಕೊಂಡ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗೂ ರಾಜಧಾನಿಯ ಜನ ಬೆಂಗಳೂರಿನಲ್ಲೇ ಮೊಟ್ಟ ಮೊದಲ ಬಾರಿಗೆ ವೈರಸ್ ಕಾಣಿಸಿಕೊಂಡಿದ್ದು ಆರೋಗ್ಯ ಇಲಾಖೆ ಎಲ್ಲಡೆ ಅಲರ್ಟ್ ಆಗಿದೆ. ಈ ಹಿನ್ನೆಲೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ.

ಸದ್ಯ, ದೆಹಲಿಯಲ್ಲಿರುವ ಸಿಎಂ ಬೊಮ್ಮಾಯಿ ಅವರು ಇಂದು ಬೆಂಗಳೂರಿಗೆ ಧಾವಿಸಲಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಆರೋಗ್ಯ ತಜ್ಞರ ಜೊತೆ ಸಭೆ ನಡೆಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ ಎಂದು ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇಂದಿನ ಸಭೆ ಬಳಿಕ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಗೆ ಬರಲಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ಒಮಿಕ್ರಾ ಸೋಂಕಿನ ಪತ್ತೆ ಹಿನ್ನೆಲೆ ಸರ್ಕಾರ ಯಾವೆಲ್ಲಾ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷದ ವೃದ್ದ ಮತ್ತು ಬೆಂಗಳೂರಿನ ವೈದ್ಯರಾದ 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್‌ ವೈರಸ್‌ ಪತ್ತೆಯಾಗಿದೆ.

Edited By : Nagaraj Tulugeri
PublicNext

PublicNext

03/12/2021 07:36 am

Cinque Terre

35.98 K

Cinque Terre

0

ಸಂಬಂಧಿತ ಸುದ್ದಿ