ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ರೂಪಾಂತರ ತಳಿ 'ಒಮಿಕ್ರೋನ್' ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದೇನು?

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ 19 ರೂಪಾಂತರ ತಳಿ B.1.1529 (ಒಮಿಕ್ರೋನ್) ಬಗ್ಗೆ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ರೂಪಾಂತರಿ ಕೋವಿಡ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಹೊಸ ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ನಿನ್ನೆ ಇದೇ ವಿಚಾರವಾಗಿ ಸಭೆ ಮಾಡಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರೂಪಾಂತರಿ ವೈರಸ್ ಇರುವ ದೇಶದಿಂದ ಬಂದರೆ ಏರ್​ಪೋರ್ಟ್​ನಲ್ಲೆ ಟೆಸ್ಟ್ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ.

ಟೆಸ್ಟ್​ನಲ್ಲಿ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಇಡಲಾಗುತ್ತದೆ. ಒಂದು ವಾರದ ಬಳಿಕ ಮತ್ತೊಂದು ಟೆಸ್ಟ್ ಮಾಡುತ್ತೇವೆ. ಧಾರವಾಡದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಗೂ ಟೆಸ್ಟ್ ನಡೆಸಲಾಗಿದೆ. ಜಿನೋಮಿಕ್ ಸೀಕ್ವೆನ್ಸ್ ಟೆಸ್ಟಿಂಗ್​ಗೆ ಸ್ಯಾಂಪಲ್ ಕಳಿಸಿದ್ದೇವೆ. ಟೆಸ್ಟ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಗಂಭೀರ ಸಮಸ್ಯೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.

45 ಲಕ್ಷ ಜನ ಇನ್ನೂ 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಅವಧಿ ಮುಗಿದಿದ್ದರೂ ಕೆಲವರು ಲಸಿಕೆಯನ್ನು ಪಡೆದಿಲ್ಲ. ಉದಾಸೀನ ಮಾಡದೆ ಕೊವಿಡ್ ಲಸಿಕೆಯನ್ನು ಪಡೆಯಬೇಕು. ಉದಾಸೀನ ಮಾಡಿದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಲಸಿಕೆ ಪಡೆಯದವರು ತಕ್ಷಣವೇ ಪಡೆಯಬೇಕೆಂದು ಮನವಿ ಮಾಡಿದ ಸಚಿವರು, ರೂಪಾಂತರಿ ವೈರಸ್ ಬರುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಳ್ಳಬೇಕು. ನಾವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಲಸಿಕೆ ನೀಡಿದ್ದೇವೆ. ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕು ಸೋಲಿಸಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.

B.1.1.529 ರೂಪಾಂತರಿಗೆ 'ಒಮಿಕ್ರಾನ್' ಎಂದು ಹೆಸರು. 'ಒಮಿಕ್ರಾನ್' ವೈರಸ್ ಹರಡುವ ಪ್ರಮಾಣ ಹೆಚ್ಚಾಗಿದೆ. ಆದರೆ ರೋಗ ಲಕ್ಷಣಗಳು ಮೊದಲಿನಂತೆ ಇವೆ. ಡೆಲ್ಟಾಗಿಂತ ಗಂಭೀರ ಇದ್ಯಾ ಎಂದು ಪರಿಶೀಲಿಸಬೇಕು. ಜಿನೋಮಿಕ್ ಸೀಕ್ವೆನ್ಸಿಂಗ್ ಮೂಲಕ ತಿಳಿಯಬೇಕಾಗಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇರಲ್ಲ. ಸೋಮವಾರದಿಂದ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಔಷಧ ಪೂರೈಕೆ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇವೆ. ಸೋಮವಾರದಿಂದ ಔಷಧಕ್ಕಾಗಿ ಚೀಟಿ ಬರೆದುಕೊಡಲ್ಲ. ಹೊರಗೆ ಔಷಧ ತರುವಂತೆ ಚೀಟಿ ಬರೆದುಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

Edited By : Vijay Kumar
PublicNext

PublicNext

27/11/2021 06:41 pm

Cinque Terre

51.96 K

Cinque Terre

4

ಸಂಬಂಧಿತ ಸುದ್ದಿ