ಹಾವೇರಿ: ಕರ್ನಾಟಕದಲ್ಲಿ ಕೊವಿಡ್ 3ನೇ ಅಲೆಯ ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಹೇರಬಹುದು ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಸ್ಪಷ್ಟನೆ ನೀಡಿದ್ದಾರೆ.
ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಬುಧವಾರ ಮಾತನಾಡಿದ ಅವರು, 'ರಾಜ್ಯದಲ್ಲಿ ಹೊಸ ರೂಪಾಂತರಿಯ 2 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ರೂಪಾಂತರಿ ವೈರಾಣುಗಳನ್ನು ಎದುರಿಸಲು ರಾಜ್ಯದ ಆರೋಗ್ಯ ವ್ಯವಸ್ಥೆ ಸಜ್ಜಾಗಿದೆ. ಸದ್ಯ ರಾಜ್ಯದಲ್ಲಿ ಕಠಿಣ ಲಾಕ್ಡೌನ್ ಹೇರುವ ಚಿಂತನೆ ಸರ್ಕಾರದ ಎದುರು ಇಲ್ಲ' ಎಂದು ಹೇಳಿದರು.
ಕೊರೊನಾ ಎದುರಿಸಲು ಲಸಿಕೆ ಪಡೆಯುವುದೊಂದೇ ಪರಿಹಾರ. ಎರಡು ಲಸಿಕೆ ಪಡೆದಿದ್ದವರಿಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ. ಡೆಲ್ಟಾ ವೆರಿಯಂಟ್ AY.4.2 ಥರದ 20 ರೂಪಾಂತರಗಳಿವೆ. ಈ ಬಗ್ಗೆ ತಜ್ಞರು ಈಗಾಗಲೇ ವರದಿಯನ್ನೂ ಕೊಟ್ಟಿದ್ದಾರೆ ಎಂದರು.
PublicNext
28/10/2021 11:03 pm