ಬೆಂಗಳೂರು: ಅಕ್ಟೋಬರ್ 25 ರವರೆಗೆ ಕೋವಿಡ್ ಕಣ್ಗಾವಲು ನಿಯಂತ್ರಣ ಹಾಗೂ ಜಾಗ್ರತೆ ಮಾರ್ಗಸೂಚಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ದಿನಾಂಕ 3 ಜುಲೈ 2021ರಂದು ಹೊರಡಿಸಲಾದ ಕಣ್ಗಾವಲು, ನಿಯಂತ್ರಣ ಮತ್ತು ಜಾಗರೂಕತೆ ಮಾರ್ಗಸೂಚಿಗಳನ್ನು ಮತ್ತು ಈ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವನ್ನು ದಿನಾಂಕ 25 ಅಕ್ಟೋಬರ್ 2021 ರ ಬೆಳಗ್ಗೆ 6 ಗಂಟೆವರೆಗೆ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ.
PublicNext
08/10/2021 10:59 pm