ಬೆಂಗಳೂರು ರೂಪಾಂತರ ಕೊರೊನಾ ವೈರಸ್ ಹಿನ್ನಲೆಯಲ್ಲಿ ರಾತ್ರಿ ಪಾರ್ಟಿಗಳನ್ನು ನಿಷೇಧಿಸಲಾಗಿದೆ. ರಾತ್ರಿ ಕರ್ಫ್ಯೂ ಹಾಕಿದ್ರೂ ತಪ್ಪು, ಪಾರ್ಟಿ ಬೇಡ ಅಂದ್ರೂ ತಪ್ಪು ಅನ್ನೋದಾದ್ರೆ ನಾವು ಜನರ ಆರೋಗ್ಯ ಕಾಪಾಡಲು ಕ್ರಮ ಕೈಗೊಂಡಿದ್ದು ತಪ್ಪಾ ಎಂದು ವೈದ್ಯಕೀಯ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕೊರೊನಾ ಹೊಸ ಪ್ರಬೇಧದ ಸೋಂಕಿನ ಆತಂಕ ಹಿನ್ನೆಲೆ ಶಾಲೆ-ಕಾಲೇಜು ಆರಂಭದ ನಿರ್ಧಾರ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ. ಇಂಗ್ಲೆಂಡಿನಿಂದ ಬರುವ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಂಡು ಬರುತ್ತಿದೆ. ಈ ನಡುವೆ ಕೊರೊನಾ ಹೆಚ್ಚಾಗಿ ಕಂಡು ಬಂದರೆ ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತದೆ. ಈ ಬಗ್ಗೆ ಡಿ.28ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಇನ್ನು ಮಾರ್ಕೆಟ್‍ಗಳಲ್ಲಿ ದೈಹಿಕ ಅಂತರ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.
ಜನರು ತಮ್ಮಷ್ಟಕ್ಕೆ ತಾವೇ ಈ ಬಗ್ಗೆ ಎಚ್ಚರ ವಹಿಸಬೇಕು. ಕರ್ಫ್ಯೂ ಸಿದ್ಧತೆ ಮಾಡಿಕೊಳ್ಳಲು 1 ದಿನದ ಅವಕಾಶ ಕೇಳಿದ್ದರು. ವ್ಯಾಪಾರಿಗಳು 1 ದಿನದ ಅವಕಾಶ ಕೇಳಿದ್ರು ಹೀಗಾಗಿ ನಿನ್ನೆಯ ಕರ್ಫ್ಯೂ ಇಂದಿನ ರಾತ್ರಿಗೆ ಬದಲಾಯಿಸಲಾಗಿದೆ ಎಂದು ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಇಂದಿನಿಂದ ನೈಟ್ ಕಫ್ರ್ಯೂ ಜಾರಿ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಯಿಸಿದ ಸಚಿವರು ಸಿಎಂ ವಿವೇಚನೆಯಿಂದ ತೆಗೆದುಕೊಂಡಿರುವ ನಿರ್ಧಾರವಿದು. ಕೋವಿಡ್ ನಿಯಂತ್ರಿಸಿದ್ರೂ ತಪ್ಪು, ನಿಯಂತ್ರಿಸದಿದ್ದರೂ ತಪ್ಪು..? ಏನು ಮಾಡಿದರೂ ತಪ್ಪು ಎನ್ನುವಂತೆ ಆಡುತ್ತಿದ್ದಾರೆ. ರಾತ್ರಿ ಅನಗತ್ಯ ಓಡಾಟ, ರಾತ್ರಿ ಪಾರ್ಟಿ ತಪ್ಪಿಸೋದು ತಪ್ಪಾ ಎಂದು ಸಚಿವ ಸುಧಾಕರ್ ಪ್ರಶ್ನಿಸಿದರು.
PublicNext
24/12/2020 12:37 pm