ಬೆಂಗಳೂರು: ರಾಜ್ಯದಲ್ಲಿ ಹೊಸ ಕೊರೊನಾ ಅಲೆ ತಡೆಗಾಗಿ ಬೀಗ ಹಾಕದ ರೀತಿಯಲ್ಲಿ ಸಿಎಂ ಯಡಿಯೂರಪ್ಪ ಅವರ ಸರ್ಕಾರವು ಮಾರ್ಗಸೂಚಿಗಳನ್ನ ಪ್ರಕಟಿಸಿದೆ.
ಬಹುತೇಕ ಎಲ್ಲದಕ್ಕೂ ಸರ್ಕಾರ ಅವಕಾಶ ನೀಡಿದ್ದು, ನೆಪ ಮಾತ್ರಕ್ಕೆ ಮಾರ್ಗಸೂಚಿ ಪ್ರಕಟಿಸಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇವತ್ತಿನಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ ಅಂತ ಸರ್ಕಾರ ಹೇಳಿತ್ತು. ಇದೀಗ ನಾಳೆಯಿಂದ ಮತ್ತು ನೈಟ್ ಕರ್ಫ್ಯೂ ಸಮಯದಲ್ಲಿಯೂ ಬದಲಾವಣೆ ಮಾಡಿದೆ.
ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಮಾರ್ಗಸೂಚಿ
* ರಾಜ್ಯದಲ್ಲಿ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‍ಕಫ್ರ್ಯೂ ಜಾರಿಯಾಗಲಿದೆ.
* ಜನವರಿ 2ರಂದು ಬೆಳಗ್ಗೆ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿ
* ಕೈಗಾರಿಕೆ, ನೈಟ್ ಶಿಫ್ಟ್ ಆಧರಿತ ಕಂಪೆನಿಗಳಿಗೆ ಶೇ.50 ರಷ್ಡು ನೌಕರರ ಮೂಲಕ ಕಾರ್ಯಾಚರಣೆಗೆ ಅನುಮತಿ. ನೌಕರರು ಕಂಪನಿ, ಕೈಗಾರಿಕೆಗಳ ಐಡಿಕಾರ್ಡ್ ತೋರಿಸಿ ಹೋಗಬೇಕು. ಕೈಗಾರಿಕೆಗಳಿಗೆ 24/7 ಕಾರ್ಯನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ.
* ದೂರದ ಪ್ರಯಾಣದ ಬಸ್ ಮತ್ತು ರೈಲ್ವೇಗಳಿಗೆ ಅನುಮತಿ
* ಪಿಕಪ್ ಮತ್ತು ಡ್ರಾಪ್ ಗೆ ಮಾತ್ರ ಓಲಾ, ಉಬರ್, ಆಟೋಗಳ ಸಂಚಾರಕ್ಕೆ ಅವಕಾಶ
* ಬಸ್ ನಿಲ್ದಾಣ, ರೈಲು ಸ್ಟೇಶನ್, ಏರ್ ಪೋರ್ಟ್ ಗಳಿಂದ ಪಿಕಪ್, ಡ್ರಾಪ್ ಗೆ ಮಾತ್ರ ಅವಕಾಶವಿದ್ದು, ಅಧಿಕಾರಿಗಳು ಕೇಳಿದಾಗ ಟಿಕೆಟ್ ತೋರಿಸಬೇಕು.
* ಷರತ್ತು, ನಿರ್ಬಂಧಗಳೊಂದಿಗೆ ಹೊಸ ವರ್ಷಾಚರಣೆ, ಕ್ರಿಸ್ ಮಸ್ ಗೆ ಅವಕಾಶ
* ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ.
PublicNext
23/12/2020 07:21 pm