ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ವರ್ಣರಂಜಿತ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅವರ ಮೂತ್ರಪಿಂಡಗಳ ಸಾಮರ್ಥ್ಯ ದಿನೇ ದಿನೇ ಕಡಿಮೆಯಾಗುತ್ತಿದೆ.
ಸದ್ಯ ಅವರ ಎರಡೂ ಕಿಡ್ನಿಗಳು ಕೇವಲ 25% ಮಾತ್ರ ಕೆಲಸ ಮಾಡುತ್ತಿವೆ. ಇದನ್ನ ಸ್ವತಃ ವೈದ್ಯರೇ ಧೃಡಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ನ ವೈದ್ಯ ಡಾ. ಉಮೇಶ್ ಪ್ರಸಾದ್, ಈ ಮುಂಚೆ ಲಾಲೂ ಅವರ ಎರಡೂ ಕಿಡ್ನಿಗಳು 35% ಕೆಲಸ ಮಾಡುತ್ತಿದ್ದವು. ಈಗ 10% ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದ ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ಈ ಮೂಲಕ ಕಂಡು ಬಂದಿದೆ.
PublicNext
15/12/2020 10:49 am