ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಲಿಂಗಪುರದ ಪುರಸಭೆ ಗದ್ದಲ : ಚಾಂದಿನಿ ನಾಯಕ್ ಗೆ ಅಬಾರ್ಷನ್

ಬಾಗಲಕೋಟೆ: ನ.9ರಂದು ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಚಾಂದಿನಿ ಅಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್ ನ್ನು ಬೆಂಬಲಿಸಲು ನಿರ್ಧರಿಸಿದ್ದರು.

ಈ ವೇಳೆ, ಚಾಂದಿನಿಯನ್ನು ಗೈರಾಗಿಸಲು ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭೆಯಿಂದ ಹೊರ ಹೋಗುವಂತೆ ಅವರನ್ನು ನೂಕಾಡಿದ್ದು ಎಲ್ಲರಿಗೂ ತಿಳಿದಿರುವ ಸತ್ಯ.

ಈ ಎಳೆದಾಟ ಪ್ರಕರಣದಲ್ಲಿ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದ ಪುರಸಭೆ ಬಿಜೆಪಿ ಸದಸ್ಯೆ ಚಾಂದಿನಿ ನಾಯಕ್ ಗೆ ಗರ್ಭಪಾತವಾಗಿದೆ.

ಆ ದಿನ ತಳ್ಳಾಟ ನೂಕಾಟದಲ್ಲಿ ಶಾಸಕ ಸಿದ್ದು ಸವದಿ ತನ್ನನ್ನು ಮೆಟ್ಟಿಲಿನಿಂದ ಕೆಳಗೆ ತಳ್ಳಿದ್ದರು ಎಂದು ಚಾಂದಿನಿ ನಾಯಕ್ ಆರೋಪಿಸಿದ್ದಾರೆ.

ಜೊತೆಗೆ, ಚಾಂದಿನಿ ಕೆಳಗೆ ಬೀಳುತ್ತಿದ್ದಂತೆ ಆಕೆಯನ್ನು ಇತರೆ ಕಾರ್ಯಕರ್ತರು ಎಳೆದಾಡಿದ್ದರು ಎಂದು ಆರೋಪಿಸಿದ್ದಾರೆ.

3 ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿಯನ್ನಾ ಶಾಸಕರು ತಳ್ಳಿದಾಗ ಕೆಳಗೆ ಬಿದ್ದಳು. ಘಟನೆಯಲ್ಲಿ ಆಕೆ ಹೊಟ್ಟೆಗೆ ಏಟು ಬಿದ್ದ ಪರಿಣಾಮ ಮಗುವಿನ ಬೆಳವಣಿಗೆ ಕುಂಠಿತವಾಯ್ತು.

ಈ ಹಿನ್ನೆಲೆಯಲ್ಲಿ ಚಾಂದಿನಿ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸಿಕೊಳ್ಳಬೇಕಾಯಿತು ಎಂದು ಸದಸ್ಯೆ ಪತಿ ನಾಗೇಶ್ ನಾಯಕ್ ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

30/11/2020 02:03 pm

Cinque Terre

108.77 K

Cinque Terre

9

ಸಂಬಂಧಿತ ಸುದ್ದಿ