ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಲೋ ಬದಲಿಗೆ ವಂದೇ ಮಾತರಂ ಹೇಳಿ; 'ಮಹಾ' ಸರ್ಕಾರದ ಖಡಕ್ ಆದೇಶ

ಮುಂಬೈ: ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು, ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರಿಂದ ಫೋನ್ ಕರೆಗಳನ್ನು ಸ್ವೀಕರಿಸುವಾಗ 'ಹಲೋ' ಬದಲಿಗೆ 'ವಂದೇ ಮಾತರಂ' ಎಂದು ಹೇಳುವುದನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಈ ಮೂಲಕ ಸರ್ಕಾರಿ ನೌಕರರು ಇನ್ಮೇಲೆ ಫೋನ್‌ನಲ್ಲಿ, ಸಾರ್ವಜನಿಕ ಸಭೆಗಳಲ್ಲಿ 'ವಂದೇ ಮಾತರಂ'ನೊಂದಿಗೆ ಮಾತನ್ನು ಆರಂಭಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ಜಾರಿಗೆ ಬರಲಿರುವ ಬದಲಾವಣೆಯ ಕುರಿತು ಮಹಾರಾಷ್ಟ್ರ ಸಾಮಾನ್ಯ ಆಡಳಿತ ಇಲಾಖೆ ಶನಿವಾರ ಸುತ್ತೋಲೆ ಹೊರಡಿಸಿತ್ತು.

Edited By : Vijay Kumar
PublicNext

PublicNext

02/10/2022 03:17 pm

Cinque Terre

69.44 K

Cinque Terre

4