ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಈಗ ಪ್ಯಾಡ್ ಕೇಳ್ತೀರಿ, ನಾಳೆ ಕಾಂಡೋಮ್ ಕೇಳ್ತೀರಿ' ಎಂದ ಮಹಿಳಾ ಐಎ‌ಎಸ್ ಅಧಿಕಾರಿಗೆ ನೋಟಿಸ್

ಪಾಟ್ನಾ: ಸ್ಯಾನಿಟರಿ ಪ್ಯಾಡ್ ಬಗ್ಗೆ ಪ್ರಶ್ನೆ ಮಾಡಿದ್ದ ಬಾಲಕಿಗೆ ಈಗ ಪ್ಯಾಡ್ ಕೇಳ್ತೀರಿ ನಾಳೆ ಕಾಂಡೋಮ್ ಕೇಳ್ತೀರಿ ಎಂದು ಉದ್ಧಟತನ ತೋರಿದ್ದ ಮಹಿಳಾ ಐಎ‌ಎಸ್ ಅಧಿಕಾರಿ ಹರ್‌ಜೋತ್ ಕೌರ್ ಭಮ್ರಾ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಈ ಅಧಿಕಾರಿಣಿಗೆ ನೋಟಿಸ್ ನೀಡಿದೆ. ಇದಾದ ನಂತರ ಈ ದರ್ಪದ ಅಧಿಕಾರಿಣಿ ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ತಾವು ಹೆಣ್ಣುಮಕ್ಕಳಿಗೆ ಮಾದರಿ ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದರು.

ಬಿಹಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಭಮ್ರಾ ರಾಷ್ಟ್ರೀಯ ಮಹಿಳಾ ಆಯೋಗವು ನಿನ್ನೆ ಗುರುವಾರ ನೋಟಿಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೀಶ್‌ಕುಮಾರ್ ನಾನು ಘಟನೆ ಕುರಿತಾದ ವರದಿಗಳನ್ನು ಗಮನಿಸಿದ್ದೇನೆ. ಆಕೆ ತಪ್ಪಿತಸ್ಥೆ ಎಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

29/09/2022 10:50 pm

Cinque Terre

77.97 K

Cinque Terre

10

ಸಂಬಂಧಿತ ಸುದ್ದಿ