ಗದಗ : ಕಪ್ಪತ್ತಗುಡ್ಡ ಕುಸಿತದಿಂದ ಆಯಿಲ್ ನೀರು ಹೊರಬರುತ್ತಿದೆ. ಇದು ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ಕ್ರಮ ತೆಗೆದುಕೊಂಡಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ನಿರ್ದಿಷ್ಟವಾದ ವರದಿಯನ್ನು ಕೊಟ್ಟು ಕಪ್ಪತ್ತಗುಡ್ಡ ಎಷ್ಟರ ಮಟ್ಟದಲ್ಲಿ ಅರಣ್ಯ ಇದೆ ಎಷ್ಟು ಜನರು ಬರುತ್ತಾರೆ ಅದನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಕಪ್ಪತ್ತಗುಡ್ಡದಲ್ಲಿ ಆಯಿಲ್ ಮಿಶ್ರಿತ ನೀರು ಬರುತ್ತಿರುವುದು ನನ್ನ ಗಮನಕ್ಕೂ ಇದೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿ ರಾಜ್ಯದಿಂದ ಭೂಗರ್ಭ ತಜ್ಞರನ್ನು ಕರೆಸಿಸಿ ಪರಿಶೀಲನೆ ಮಾಡಲಾಗುವುದು.ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಚಿವರು ಗದಗ ಜಿಲ್ಲೆ 25 ನೇ ರಜತಮಹೋತ್ಸವ ಆಚರಣೆ ಮಾಡಲಾಗುವುದು ಎಂದರು.
PublicNext
05/09/2022 07:57 pm