ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗಿಲ್ಲ, ಬದಲಾಯಿಸಬೇಕೆಂಬ ನಿಯಮವೂ ಇಲ್ಲ: ಸಿ.ಟಿ ರವಿ

ದಾವಣಗೆರೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಹತ್ತಾರು ರಾಜ್ಯಗಳಲ್ಲಿ ಕೆಲಸ ಮಾಡಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ಸಂಬಂಧ ಯಾವ ಹಂತದಲ್ಲಿಯೂ ಆಗಿಲ್ಲ. ಸುದ್ದಿಗಳು ಆಗಾಗ್ಗೆ ಬರುತ್ತಿರುತ್ತವೆ. ವೈಯಕ್ತಿಕ ಆಕಾಂಕ್ಷೆ ಇಟ್ಟುಕೊಂಡು ಎಂದಿಗೂ ಕೆಲಸ ಮಾಡಿಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಕಾರ್ಯಕರ್ತನಾಗಿ ನಿಭಾಯಿಸಿಕೊಂಡು ಬರುತ್ತಿದ್ದೇನೆ. ಮೂರು ವರ್ಷ ಆಗಿದೆ ಎಂಬ ಮಾತ್ರಕ್ಕೆ ಬದಲಾವಣೆ ಮಾಡಬೇಕೆಂಬ ನಿಯಮ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷವಾಗಿದೆ. ಬದಲಾಯಿಸುವ ಕುರಿತಂತೆ ಎಲ್ಲಿಯೂ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಧ್ರುವೀಕರಣ ಎಂಬುದು ಎಲ್ಲಾ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಾಜಕಾರಣ ನಿಂತ ನೀರಲ್ಲ. ಬಿಜೆಪಿಗೆ ಬಂದವರು ಅವರ ಭವಿಷ್ಯ ಭದ್ರಪಡಿಸಿಕೊಂಡಿದ್ದಾರೆ. ಪಕ್ಷ ಬಿಟ್ಟವರು ಭವಿಷ್ಯ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ದೇಶಕ್ಕೆ ಹಾಗೂ ಬಿಜೆಪಿಗೆ ಬಂದವರಿಗೆ ಉಜ್ವಲ ಭವಿಷ್ಯ ಇದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

Edited By : Somashekar
PublicNext

PublicNext

03/09/2022 05:07 pm

Cinque Terre

71.39 K

Cinque Terre

1

ಸಂಬಂಧಿತ ಸುದ್ದಿ