ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೂಸ್ ಟೂರಿಸಂಗೆ ನವ ಮಂಗಳೂರು ಸೂಕ್ತ ಸ್ಥಳ : ‘ಡಬಲ್ ಇಂಜಿನ್’ ಸರ್ಕಾರ ಕೊಂಡಾಡಿದ ಮೋದಿ

ಮಂಗಳೂರು : ಕಡಲನಗರಿಗೆ ಇಂದು ಪ್ರಧಾನಿ ಮೋದಿ ಆಗಮಿಸಿದ್ದು 3,800 ಕೋಟಿ ರೂ. ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಬಳಿಕ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಕರ್ನಾಟಕದ ಮೀನುಗಾರಿಕೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಉತ್ಪಾದನಾ ವಲಯವನ್ನು ವಿಸ್ತರಿಸುವ ಅಗತ್ಯ ಇದೆ. ಮೇಕ್ ಇನ್ ಇಂಡಿಯಾ ವಿಸ್ತರಿಸುವುದು ಮುಖ್ಯ. ರಫ್ತು ಹೆಚ್ಚಿಸಬೇಕು ಆಮೂಲಕ ಉತ್ಪನ್ನಗಳ ವೆಚ್ಚವನ್ನು ವಿಶ್ವದ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ 11 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಯೋಜನೆ ಲಾಭ ಸಿಕ್ಕಿದೆ. ಕರ್ನಾಟಕದಲ್ಲಿ 55 ಲಕ್ಷ ಜನರಿಗೆ ಕಿಸಾನ್ ಯೋಜನೆ ಲಾಭ ಸಿಕ್ಕಿದೆ. ಮಾತ್ರವಲ್ಲ ಕರ್ನಾಟಕದ ಲಕ್ಷಗಟ್ಟಲೆ ಸಣ್ಣ ಉದ್ಯಮಿಗಳಿಗೆ ಸಾಲ ಸಿಕ್ಕಿದೆ. ಬಡವರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ದೋಣಿ ವಿತರಿಸಿದ್ದೇವೆ.

ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆ ಈಡೇರಿಸಲು ಹಗಲು-ರಾತ್ರಿ ಕೆಲಸ ಮಾಡಲಾಗುತ್ತಿದೆ. 8 ವರ್ಷದಲ್ಲಿ ಮೆಟ್ರೋ ನಗರಗಳ ಸಂಖ್ಯೆ 4 ಪಟ್ಟು ಹೆಚ್ಚಿದೆ. ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ತಲುಪಿದೆ ಎಂದರು.

Edited By : Nirmala Aralikatti
PublicNext

PublicNext

02/09/2022 04:59 pm

Cinque Terre

47.52 K

Cinque Terre

9

ಸಂಬಂಧಿತ ಸುದ್ದಿ