ಮೈಸೂರು: ಮೈಸೂರು ಮೇಯರ್,ಉಪಮೇಯರ್ ಸ್ಥಾನಕ್ಕೆ ಸೆ.6ರಂದು ಚುನಾವಣೆ ಫಿಕ್ಸ್ ಆಗಿರುವ ಬಗ್ಗೆ ಪ್ರಾದೇಶಿಕ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಅಂದೇ ಚುನಾವಣೆ ನಡೆಯಲಿದೆ. ಕಳೆದ 6 ತಿಂಗಳಿಂದ ಬಾಕಿ ಉಳಿದಿದ್ದ ಮೇಯರ್, ಉಪಮೇಯರ್ ಚುನಾವಣೆ ಇದೀಗ ಸರ್ಕಾರಿಂದ ಮೀಸಲಾತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರಿಂದ ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಈ ಬಾರಿ ನಾಡಹಬ್ಬ ದಸರಾಗೂ ಮುನ್ನವೇ ಚುನಾವಣೆ ನಡೆಯುತ್ತಿದ್ದು, ದಸರೆಗೆ ನೂತನ ಮೇಯರ್ ಆತಿಥ್ಯ ವಹಿಸಲಿದ್ದಾರೆ.
PublicNext
25/08/2022 09:15 pm