ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಪ್ರಾಣಗಳ ಹೆಸರಿನಲ್ಲಿ ಐದು ಸಂಕಲ್ಪ ವಿವರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಚಪ್ರಾಣಗಳ ಹೆಸರಿನಲ್ಲಿ ಐದು ಸಂಕಲ್ಪಗಳನ್ನು ದೇಶದ ಎದುರು ತೆರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೆ ದೇಶವು ಸ್ವಾತಂತ್ರ್ಯ ದಿನಾಚರಣೆಯ ಶತಮಾನೋತ್ಸವದ ವೇಳೆಗೆ ಈ ಆಶಯಗಳು ಈಡೇರಬೇಕು ಕರೆ ನೀಡಿದ್ದಾರೆ.

1) ವಿಕಸಿತ ಭಾರತ

2) ಸ್ವಾಭಿಮಾನಿ ಭಾರತ (ಎಲ್ಲಿಯೂ ಜೀತ ಪದ್ಧತಿ ಇರಬಾರದು)

3) ಪರಂಪತೆಯ ಬಗ್ಗೆ ಹೆಮ್ಮೆ (ವಿರಾಸತ್)

4) ಏಕತೆ

5) ನಾಗರಿಕ ಕರ್ತವ್ಯ

ಅಮೃತಕಾಲದ ಮೊದಲ ಮುಂಜಾವಿನಲ್ಲಿ ನಾವು ಇಂದು ಇದ್ದೇವೆ. ದೇಶವು ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುವ ಹೊತ್ತಿಗೆ ಭಾರತದ ಕನಸುಗಳನ್ನು ಈಡೇರಿಸುವ ಕಾಲ. ತ್ರಿವರ್ಣ ಧ್ವಜದ ಎದುರು ನಾವು ಪ್ರತಿಜ್ಞೆ ಮಾಡಿದರೆ ಅದು ನಮಗೆ ಶಕ್ತಿ ಕೊಡುತ್ತದೆ. ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವಾಗಬೇಕು. ಮನುಷ್ಯನೇ ನಮ್ಮ ಚಿಂತನೆಯ ಕೇಂದ್ರವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಮ್ಮ ದೇಶವು ಇಂಥ ಎಷ್ಟೋ ಸಂಕಲ್ಪಗಳನ್ನು ಈಡೇರಿಸಿದೆ. ಸ್ವಚ್ಛ ಭಾರತ್ ಸಂಕಲ್ಪ, ಲಸಿಕೆ ಅಭಿಯಾನ ಇಂಥದ್ದೇ ಸಂಕಲ್ಪಗಳು ಈಡೇರಿದ ಉದಾಹರಣೆಗಳಾಗಿವೆ. ದೇಶದ ಮೂಲೆ ಮೂಲೆಗಳಿಗೆ ವಿದ್ಯುತ್ ಸಂಪರ್ಕ, ನಲ್ಲಿಗಳ ಮೂಲಕ ನೀರು ಸಂಪರ್ಕ ಕಡಿಮೆ ಸಾಧನೆಯಲ್ಲ. ಸಂಕಲ್ಪ ಮಾಡಿ ಮುನ್ನಡೆದರೆ ಎಲ್ಲವೂ ಸಾಧ್ಯವಿದೆ. ನವೀಕರಿಸಬಹುದಾದ ಇಂಧನಗಳು, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತದ ಮುನ್ನಡೆ ಗಮನೀಯವಾಗಿದೆ ಎಂದು ಮೋದಿ ನನೆದರು.

Edited By : Vijay Kumar
PublicNext

PublicNext

15/08/2022 08:24 am

Cinque Terre

178.54 K

Cinque Terre

52

ಸಂಬಂಧಿತ ಸುದ್ದಿ