ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸರಕಾರದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ: ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯದ ಎಲ್ಲ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿರುವ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯದ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ಮಾಡಲು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ ಎಂದಿದ್ದಾರೆ.

ಹೀಗಿದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ

ಡಾ.ಎನ್ ಮಂಜುಳ – ಬೆಂಗಳೂರು ನಗರ

ಕೆಪಿ ಮೋಹನ್ ರಾಜ್ – ಬೆಂಗಳೂರು ಗ್ರಾಮಾಂತರ

ಡಾ.ಜೆ ರವಿಶಂಕರ್ – ರಾಮನಗರ

ಡಾ.ಪಿಸಿ ಜಾಫರ್ – ಚಿತ್ರದುರ್ಗ

ಉಮಾ ಮಹಾದೇವನ್ – ಕೋಲಾರ

ಎಲ್ ಕೆ ಅತೀಕ್ – ಬೆಳಗಾವಿ

ಡಾ. ಏಕ್ ರೂಪ್ ಕೌರ್ – ಚಿಕ್ಕಬಳ್ಳಾಪುರ

ಟಿಕೆ ಅನಿಲ್ ಕುಮಾರ್ – ಶಿವಮೊಗ್ಗ

ಎಸ್ ಆರ್ ಉಮಾಶಂಕರ್ – ದಾವಣಗೆರೆ

ಎನ್ ಜಯರಾಮ್ – ಮೈಸೂರು

ಡಾ.ವಿ ರಾಮ್ ಪ್ರತಾವ್ ಮನೋಹರ್ – ಮಂಡ್ಯ

ಬಿ.ಬಿ ಕಾವೇರಿ – ಚಾಮರಾಜನಗರ

ನವೀನ್ ರಾಜ್ ಸಿಂಗ್ – ಹಾಸನ

ವಿ ಅನ್ಪುಕುಮಾರ್ – ಕೊಡಗು

ಸಿ ಶಿಖಾ – ಚಿಕ್ಕಮಗಳೂರು

ಮನೋಜ್ ಜೈನ್ – ಉಡುಪಿ

ವಿ ಪೊನ್ನುರಾಜ್ – ದಕ್ಷಿಣ ಕನ್ನಡ

ರಾಕೇಶ್ ಸಿಂಗ್ – ತುಮಕೂರು

ಡಾ. ಆರ್ ವಿಶಾಲ್ – ಧಾರವಾಡ

ಮೊಹಮ್ಮದ್ ಮೊಹಿಸಿನ್ – ಗದಗ

ರಂದೀಪ್ ಡಿ – ವಿಜಯಪುರ

ಪಿ.ಹೇಮಲತ – ಉತ್ತರ ಕನ್ನಡ

ಶಿವಯೋಗಿ ಸಿ ಕಳಸದ – ಬಾಗಲಕೋಟೆ

ಸಲ್ಮಾ ಕೆ ಫಾಹಿಂ – ಕಲಬುರ್ಗಿ

ಮನೀಶ್ ಮೌದ್ಗಿಲ್ – ಯಾದಗಿರಿ

ಜಿ ಕುಮಾರ್ ನಾಯಕ್ – ರಾಯಚೂರು

ಡಾ.ರಶ್ಮಿ ವಿ ಮಹೇಶ್ – ಕೊಪ್ಪಳ

ಡಾ. ಎಂ ಎನ್ ಅಜಯ್ ನಾಗಭೂಷಣ್ – ಬಳ್ಳಾರಿ

ರಿಚರ್ಡ್ ವಿನ್ಟೆಂಟ್ ಡಿಸೋಜಾ – ಬೀದರ್

ಮೇಜರ್ ಮಣಿವಣ್ಣನ್ ಪಿ – ಹಾವೇರಿ

ತುಳಸಿ ಮದ್ದಿನೇನಿ – ವಿಜಯಪುರ

Edited By : Nagaraj Tulugeri
PublicNext

PublicNext

28/07/2022 07:38 am

Cinque Terre

103.93 K

Cinque Terre

0

ಸಂಬಂಧಿತ ಸುದ್ದಿ