ರಾಮನಗರ: ಸಾಧನೆ ಮಾಡದೆ ಸತ್ತರೆ ಸಾವಿಗೂ ಅವಮಾನ. ಅರ್ಥವಿಲ್ಲದೆ ಬದುಕಿದರೆ ಬದುಕಿಗೂ ಅವಮಾನ. ಸಿಕ್ಕ ಅವಕಾಶದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕೆಂಪೇಗೌಡರ ಜಯಂತ್ಯುತ್ಸವ ಸಮಿತಿ ವತಿಯಿಂದ ನಡೆದ ಕೆಂಪೇಗೌಡರ 513ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಿಕೆಶಿ ಮಾತನಾಡಿದರು.
ನಮಗೆ ಯಾವ ಅಧಿಕಾರ ಸಿಕ್ಕಿದೆ ಎಂಬುದು ಮುಖ್ಯವಲ್ಲ. ಸಿಕ್ಕ ಅವಕಾಶದಲ್ಲಿ ಜನರ ಬದುಕಿನಲ್ಲಿ ಏನು ಬದಲಾವಣೆ ಮಾಡಿದ್ದೇವೆ ಎಂಬುದು ಬಹಳ ಮುಖ್ಯ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಕೆಲಸ ಮಾಡಿದ್ದೇವೆ ಎಂದರು.
ವರದಿ: ಅರ್ಕೇಶ್ ಎಸ್.ರಾಮನಗರ
PublicNext
24/07/2022 10:12 pm