ಬೆಂಗಳೂರು: ಮುಂಬರುವ ಚುನಾವಣೆ ಯನ್ನು ಪ್ರಬಲವಾಗಿ ಎದುರಿಸಿ ಮಿಷನ್ 150 ಸಫಲಗೊಳಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಹಂಬಲದಲ್ಲಿರುವ ರಾಜ್ಯ ಬಿಜೆಪಿ,ಆ ಹಿನ್ನಲೆಯಲ್ಲಿ ಇಂದು ಚಿಂತನ ಸಭೆಯನ್ನು ನಡೆಸಿತು..
ನಗರದ ಹೊರವಲಯದ ರೆಸಾಟ್೯ ನಲ್ಲಿ ನಡೆದ ಸಭೆಯಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಯ ಪ್ರಮುಖರು ಪಾಲ್ಗೊಂಡಿದ್ದರು..ಈ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಆತಂಕ ಬಿಜೆಪಿ ಪಾಳಯದಲ್ಲಿತ್ತು..
ಕಳೆದ ಕೆಲತಿಂಗಳಿನಿಂದ ಬಿಎಸ್ ವೈ ಮೌನಕ್ಕೆ ಶರಣಾಗಿದ್ದನ್ನು ಗಮನಿಸಿದ್ರೆ ಬಿಎಸ್ ವೈ ಬಿಜೆಪಿ ಯಿಂದ ದೂರ ಸರೀತಿದ್ದಾರಾ ಎಂಬ ಜಿಜ್ಞಾಸೆಗೆ ಕಾರಣವಾಗಿತ್ತು.. ಆದರೆ ಇವತ್ತಿನ ಸಭೆಯಲ್ಲಿ ಬಿಎಸ್ ವೈ ಪಾಲ್ಗೊಳ್ಳುವುದರ ಮೂಲಕ ಹೈಕಮಾಂಡ್ ಗೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ..
ಅದರ ಹಿನ್ನಲೆಯಲ್ಲಿ ಈ ವರದಿ....
ವರದಿ -- ಪ್ರವೀಣ್ ನಾರಾಯಣ ರಾವ್
PublicNext
15/07/2022 06:51 pm