ಬೆಂಗಳೂರು: ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಅಭಯ ದೊರಕಿದೆ.
ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಸ್ಥಾನವೂ ಭದ್ರವಾಗಿದೆ.. ಮುಂದಿನ ವಿಧಾನಸಭಾ ಚುನಾವಣೆಯ ತನಕ ರಾಜ್ಯ ಸರ್ಕಾರದ ನಾಯಕತ್ವವನ್ನಾಗಲೀ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಲೀ ಬದಲಾಯಿಸುವುದಿಲ್ಲ ಎಂದು ಬಿಜೆಪಿ ವರಿಷ್ಟರು ಅಭಯ ನೀಡಿದ್ದಾರೆ..
ಜೊತೆಗೆ ಮುಂದಿನ ಚುನಾವಣೆಯ ದೃಷ್ಟಿಯಿಂದ ಯಾವೆಲ್ಲಾ ತಯಾರಿಗಳನ್ನು ನಡೆಸಬೇಕು ಎಂಬುದನ್ನೂ ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ..
ಎಲ್ಲವೂ ಓಕೆ ಆದರೆ ಸತತ ಹಲವು ತಿಂಗಳುಗಳಿಂದ ಬಿಎಸ್ ವೈ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣನೆ ಮಾಡಲಾಗುತ್ತಿರುವುದು ಯಾಕೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ..
ಇದು ಖಂಡಿತವಾಗಿಯೂ ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲಾ.. ಬಿಎಸ್ ವೈ ಹೊರತು ಪಡಿಸಿದ ಬಿಜೆಪಿ ಗೆ ಗೆಲುವೆಂಬುದು ಕಷ್ಟಸಾಧ್ಯ ಎಂಬ ಮಾತು ಬಹಳ ದೊಡ್ಡ ಚರ್ಚೆ ಯಲ್ಲಿದೆ. ಇದರ ಹಿನ್ನಲೆಯಲ್ಲಿ ಹೀಗೊಂದು ವಿಮರ್ಶೆ ..
-ಪ್ರವೀಣ್ ನಾರಾಯಣ..
PublicNext
06/07/2022 09:05 pm